Thursday, June 25, 2026
spot_imgspot_img
spot_imgspot_img

ಅಂತ್ಯಸಂಸ್ಕಾರದ ಬಳಿಕ ಸಮಾಧಿಯಿಂದ ನಾಪತ್ತೆಯಾದ ಶವ!

- Advertisement -
- Advertisement -
driving

ಹಾಸನ: ಅಂತ್ಯಸಂಸ್ಕಾರ ಮಾಡಿದ ಮೂರು ತಿಂಗಳ ಬಳಿಕ ಸಮಾಧಿಯಿಂದ ಶವ ನಾಪತ್ತೆಯಾದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಗ್ರಾಮದಲ್ಲಿ ನಡೆದಿದೆ.

ರಾತ್ರೋ ರಾತ್ರಿ ಸಮಾಧಿ‌ ಬಗೆದು ಕಿರಾತಕರು ಶವ ಹೊತ್ತೊಯ್ದಿದ್ದು, ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದ ವಿಚಿತ್ರ ಪ್ರಕರಣ ನಡೆದಿದೆ. ವಾಮಾಚಾರಕ್ಕಾಗಿ ಶವ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.

ಜೂನ್ ತಿಂಗಳಲ್ಲಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದ ಲಕ್ಷ್ಮಮ್ಮ ಅವರನ್ನು ಕುಟುಂಬಸ್ಥರು ತಮ್ಮದೇ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ಸೆ.21ರ ರಾತ್ರಿ ಸಮಾಧಿ ಬಗೆದು ಕಿಡಿಗೇಡಿಗಳು ಶವ ಹೊತ್ತೊಯ್ದಿದ್ದಾರೆ.

ಕಾಣೆಯಾದ ಶವ ಪತ್ತೆಗಾಗಿ ಲಕ್ಷ್ಮಮ್ಮ ಅವರ ಪುತ್ರ ಮಂಜುನಾಥ್ ಸೇರಿದಂತೆ ಇನ್ನಿತರ ಕುಟುಂಬದ ಸದಸ್ಯರು, ಅರಸೀಕೆರೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.

driving
- Advertisement -

Related news

error: Content is protected !!