- Advertisement -
- Advertisement -






ಹರಿಯಾಣ ರಾಜ್ಯದ ರೋತಕ್ ನಲ್ಲಿ ಜುಲೈ 10 ರಿಂದ 13 ರವರೆಗೆ ನಡೆಯಲಿರುವ ಅಂಡರ್-23 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ರಾಜ್ಯ ಕುಸ್ತಿ ತಂಡದ ಆಯ್ಕೆ(ಟ್ರಯಲ್ಸ್) ಪ್ರಕ್ರಿಯೆಯನ್ನು ಜುಲೈ 5 ಭಾನುವಾರದಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಕುಸ್ತಿ ಸಂಘಗಳು ತಮ್ಮ ಜಿಲ್ಲಾ ಕುಸ್ತಿಪಟುಗಳಿಗೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ.
ಸೂಚನೆಗಳು:
- ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಕುಸ್ತಿಪಟುಗಳು ಕಡ್ಡಾಯವಾಗಿ ಆಧಾರ್ ಕಾರ್ಡ್, ಜನ್ಮ ಪ್ರಮಾಣ ಪತ್ರ, WFI ಲೈಸೆನ್ಸ್ ಬುಕ್ ಒರಿಜನಲ್ ಮತ್ತು ಜೆರಾಕ್ಸ್ ಪ್ರತಿಯೊಂದಿಗೆ 2 ಫೋಟೋಗಳನ್ನು ತರತಕ್ಕದ್ದು.
- ಭಾರತೀಯ ಕುಸ್ತಿ ಸಂಘ(WFI) ಅನುಸರಿಸುತ್ತಿರುವ ಪರಿಶೀಲನಾ ವಿಧಾನ ಹಾಗೂ ಮಾರ್ಗಸೂಚಿಗಳ ಪ್ರಕಾರವೇ ಕುಸ್ತಿಪಟುಗಳ ದಾಖಲೆ ಪರಿಶೀಲನೆ ಹಾಗೂ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು
- WFI ಆದೇಶದಂತೆ UIDAI ಆಧಾರ್ ಅಪ್ಡೇಟ್ ಪರಿಶೀಲನೆಗಾಗಿ ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಕುಸ್ತಿಪಟುಗಳು ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಅನ್ನು ತರುವುದು ಅಥವಾ ಪರಿಶೀಲನೆ ವೇಳೆ ಮೊಬೈಲ್‌ಗೆ ಬರುವ OTP ಅನ್ನು ಕಡ್ಡಾಯವಾಗಿ ತಿಳಿಸಬೇಕು
- ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕುಸ್ತಿ ಪಟುಗಳಿಗೆ ಯಾವುದೇ ತೂಕದಲ್ಲಿ ವಿನಾಯತಿ ಇರುವುದಿಲ್ಲ.
- ದಿನಾಂಕ:05-07-2026ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ದೇಹತೂಕ ತಗೆದುಕೊಳ್ಳಲಾಗುವುದು. ಬೆಳಿಗ್ಗೆ 10 ಗಂಟೆಯಿಂದ ಎಲ್ಲಾ ವಿಭಾಗದ ಕುಸ್ತಿ ಪಂದ್ಯಾವಳಿಗಳು ಪ್ರಾರಂಭವಾಗುವುದು.
- ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಹ ಕುಸ್ತಿ ಪಟುಗಳು ಕಡ್ಡಾಯವಾಗಿ ತಮ್ಮ ತರಬೇತುದಾರರು / ಪಾಲಕರ ಜೊತೆ ಹಾಜರಾಗುವುದು
- ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಹ ಕುಸ್ತಿ ಪಟುಗಳ ಗಮನಕ್ಕೆ ಈ ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪ್ರದರ್ಶನದ ಅನುಗುಣವಾಗಿ ಆಯ್ಕೆ ಮಾಡಲಾಗುವುದು
- ಈ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ನಕಲಿ ದಾಖಲಾತಿಗಳನ್ನು ನೀಡಿದಲ್ಲಿ, ಅಂತಹ ಕುಸ್ತಿ ಪಟುಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು.
- Advertisement -








