Saturday, July 25, 2026
spot_imgspot_img
spot_imgspot_img

ಹಾಸನ: ಹಣಕಾಸು ವಿಚಾರಕ್ಕೆ ಯುವಕನ ಹತ್ಯೆ – ಒಂದು ಮೂಳೆಯೂ ಸಿಗದಂತೆ ಸುಟ್ಟು ಹಾಕಿದ ದುಷ್ಕರ್ಮಿಗಳು

- Advertisement -
- Advertisement -

ಹಾಸನ: ಹಣಕಾಸು ವಿಚಾರಕ್ಕೆ ಯುವಕನನ್ನು ಕರೆದೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಅರಸೀಕೆರೆ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹತ್ಯೆಯಾದ ಯುವಕನನ್ನು ವರುಣ್.ಕೆ.ಎಂ (22) ಎಂದು ಗುರುತಿಸಲಾಗಿದೆ. ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ಹಿಂಭಾಗದಲ್ಲಿ ಯುವಕನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಬಳಿಕ ವರುಣ್ ಶವದ ಒಂದು ಮೂಳೆಯೂ ಸಿಗದಂತೆ ಸುಟ್ಟು ಹಾಕಿದ್ದಾರೆ.

ಮಾ.15 ರಂದು ಗಂಡಸಿ ಪೋಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವರುಣ್‌ ಸ್ನೇಹಿತ ನೀಡಿದ ಸುಳಿವಿನ ಮೇಲೆ ತನಿಖೆ ನಡೆಸಿದಾಗ ಹತ್ಯೆಯ ಸುಳಿವು ಸಿಕ್ಕಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!