- Advertisement -
- Advertisement -




ವಿಟ್ಲ : ಕಲಾತಪಸ್ವಿ ಸಾಂಸ್ಕೃತಿಕ ತಂಡ ಆಯೋಜಿಸಿದ್ದ ಮುದ್ದು ಪುಟಾಣಿಗಳ ಆನ್‌ಲೈನ್ ಭಾವಚಿತ್ರ ಸ್ಪರ್ಧೆ “ಕಲಾಕಣ್ಮಣಿ-2026” ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಸುಮಾರು ಎರಡುವರೆ ತಿಂಗಳ ಕಾಲ 5 ಸುತ್ತುಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳು ಹಾಗೂ ಮಹಾರಾಷ್ಟ್ರ, ಕೇರಳ ರಾಜ್ಯಗಳ ಸ್ಪರ್ಧಿಗಳು ಭಾಗವಹಿಸಿದ್ದರು.
5 ಸುತ್ತುಗಳಲ್ಲಿಯೂ ಅಜೇಯರಾಗಿ ಅನುಶ್ರೀ ಎಸ್, ಚಾಮರಾಜನಗರ ಪ್ರಥಮ ಸ್ಥಾನ ಪಡೆದರು. ಗೋಕುಲ್ ಎಂ.ಪಿ, ದಾವಣಗೆರೆ ದ್ವಿತೀಯ, ಸಾನ್ವಿಕ, ಉಡುಪಿ ತೃತೀಯ ಹಾಗೂ ದಿತ್ಯ ಸುಜನ್ ದೇವಸ್ಯ ಚತುರ್ಥ ಸ್ಥಾನ ಪಡೆದುಕೊಂಡರು.ವಿಜೇತರಿಗೆ ಬಹುಮಾನ ರೂಪವಾಗಿ
ಪ್ರಥಮ:2,001 ₹ ನಗದು + ಕಲಾಕಣ್ಮಣಿ ಟ್ರೋಫಿ + ಪ್ರಶಸ್ತಿ ಪತ್ರ
ದ್ವಿತೀಯ:1,001 ₹ ನಗದು + ಕಲಾಕಣ್ಮಣಿ ಟ್ರೋಫಿ + ಪ್ರಶಸ್ತಿ ಪತ್ರ
ತೃತೀಯ:501 ₹ ನಗದು + ಕಲಾಕಣ್ಮಣಿ ಟ್ರೋಫಿ + ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
- Advertisement -







