Thursday, May 2, 2024
spot_imgspot_img
spot_imgspot_img

ಜೇನುತುಪ್ಪದ ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -
This image has an empty alt attribute; its file name is indane-gas-2-1024x748.jpg
This image has an empty alt attribute; its file name is ad-2-2.jpg

ಹಲವಾರು ಶತಮಾನಗಳಿಂದ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿರುವ ಜೇನುತುಪ್ಪದ ಅನೇಕ ಪ್ರಯೋಜನಗಳನ್ನು ನಾವು ಇಲ್ಲಿ ನೋಡೋಣ. ಸಹಸ್ರಾರು ವರ್ಷಗಳಿಂದ, ಜೇನುತುಪ್ಪವು, ಅಡುಗೆ ಮನೆಯ ಒಂದು ವಿಶೇಷ ಆಹಾರ ಹಾಗೂ ಪ್ರಮುಖವಾದ ವೈದ್ಯಕೀಯ ಪರಿಹಾರವಾಗಿದೆ.

ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿಕುಡಿದರೆ, ಅದು ರಕ್ತದ ಕೆಂಪು ರಕ್ತಕಣಗಳ ಸಂಖ್ಯೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ರಕ್ತದಲ್ಲಿನ ಆಮ್ಲಜನಕವನ್ನು ದೇಹದಲ್ಲಿನ ವಿವಿಧ ಭಾಗಗಳಿಗೆ ಸಾಗಿಸಲು ಆರ್-ಬಿ-ಸಿಯು ಕಾರಣವಾಗಿದೆ. ತುಸು ಬೆಚ್ಚಗಿನ ನೀರಿನ ಜೊತೆ ಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ, ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ, ರಕ್ತಹೀನತೆಯನ್ನು ಗುಣಪಡಿಸುತ್ತದೆ.

ಕಬ್ಬಿಣಾಂಶ ಇರುವ ಆಹಾರವನ್ನು ಸೇವಿಸದೆ ಇರುವುದು ಅಥವಾ ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳದೆ ಇರುವುದು ರಕ್ತಹೀನತೆ ಉಂಟಾಗಲು ಕಾರಣ. ಇದರಿಂದ ರಕ್ತದ ‘ಆಮ್ಲಜನಕ ರವಾನಿಸುವ’ ಸಾಮರ್ಥ್ಯವು ಕಡಿಮೆಯಾಗುತ್ತದೆ. ಆಯಾಸ, ಉಸಿರಾಟದ ತೊಂದರೆ, ಕೆಲವೊಮ್ಮೆ ಖಿನ್ನತೆ ಮತ್ತು ಇತರ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ರಕ್ತದ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಸುಧಾರಿಸುವ ಮೂಲಕ ಜೇನುತುಪ್ಪವು ಈ ಸಮಸ್ಯೆಯನ್ನು ಇಲ್ಲದ ಹಾಗೆ ಮಾಡಬಹದು.

ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಸುಧಾರಿಸುವುದು ಬಹಳ ಮುಖ್ಯ. ಏಕೆಂದರೆ ದೇಹವು ಎಷ್ಟು ಆರೋಗ್ಯಕರವಾಗಿದೆ ಹಾಗೂ ಅದು ಎಷ್ಟು ಸುಲಭವಾಗಿ ತನ್ನನ್ನು ತಾನು ಪುನಃ ಚೈತನ್ಯಗೊಳಿಸಿಕೊಳ್ಳುತ್ತದೆ ಎಂಬುವುದು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಅವಲಂಬಿಸಿರುತ್ತದೆ. ಅಧಿಕ ರಕ್ತದೊತ್ತಡದ ಮೇಲೆ ಜೇನುತುಪ್ಪದ ಧನಾತ್ಮಕ ಪರಿಣಾಮವನ್ನು, ಪ್ರಾಥಮಿಕ ಸಂಶೋಧನೆಯು ತೋರಿಸಿದೆ. ಸಾಂಪ್ರದಾಯಿಕವಾಗಿ, ಅಥವಾ ಕಡಿಮೆ ರಕ್ತದೊತ್ತಡದ ಪರಿಣಾಮಗಳನ್ನು ಕಡಿಮೆ ಮಾಡಲು ಕೂಡ ಜೇನುತುಪ್ಪವನ್ನು ಸೇವಿಸಲಾಗುತ್ತದೆ.

ಕೀಮೋಥೆರಪಿ ರೋಗಿಗಳಲ್ಲಿ ಬಿಳಿಯ ರಕ್ತಕಣಗಳ ಎಣಿಕೆ ಕಡಿಮೆಯಾಗುವುದನ್ನು ಜೇನುತುಪ್ಪವನ್ನು ತಡೆಗಟ್ಟುತ್ತದೆ ಎಂಬುದರ ಬಗ್ಗೆ ಕೆಲವು ಪ್ರಾಥಮಿಕ ಪುರಾವೆಗಳಿವೆ. ಸಣ್ಣ-ಪ್ರಮಾಣದ ಪ್ರಯೋಗದಲ್ಲಿ, ಕೀಮೋಥೆರಪಿಯ ಅವಧಿಯಲ್ಲಿ, ದಿನಕ್ಕೆ ಎರಡು ಟೀಚಮಚ ಚಿಕಿತ್ಸಕ ಜೇನುತುಪ್ಪವನ್ನು ಸೇವಿಸಿದ ನಂತರ, ಬಿಳಿಯ ರಕ್ತ ಕಣಗಳು ಕಡಿಮೆಯಾಗುವ ಅಪಾಯವಿದ್ದ ೪೦% ನಷ್ಟು ರೋಗಿಗಳಲ್ಲಿ, ಈ ಸಮಸ್ಯೆಯ ಮರುಕಳಿಸಲಿಲ್ಲ.

ಯೋಗದ ಅಭ್ಯಾಸಗಳನ್ನು ಮಾಡುವವರಿಗಾಗಿ ಜೇನುತುಪ್ಪವನ್ನು ವಿಶೇಷವಾಗಿ ಶಿಫಾರಸು ಮಾಡಲಾಗುತ್ತದೆ. ಜೇನುತುಪ್ಪವನ್ನು ಸೇವಿಸುವುದರಿಂದ, ರಕ್ತ ಪರಿಚಲನೆಯ ವ್ಯವಸ್ಥೆಯು ಸಮತೋಲನಕ್ಕೆ ಬರತ್ತದೆ. ನಿಯಮಿತವಾದ ಜೇನುತುಪ್ಪದ ಸೇವನೆ, ವ್ಯವಸ್ಥೆಗೆ ಹೆಚ್ಚು ಹುರುಪನ್ನು ನೀಡುತ್ತದೆ. ಅಭ್ಯಾಸವನ್ನು ಪ್ರಾರಂಭಿಸುವ ಮೊದಲು, ತುಸು ಬೆಚ್ಚಗಿನ ನೀರಿನ ಜೊತೆ ಸ್ವಲ್ಪ ಜೇನುತುಪ್ಪವನ್ನು ಸೇವಿಸಿದರೆ, ದೈಹಿಕ ವ್ಯವಸ್ಥೆಯು ತೆರೆದುಕೊಂಡಂತಾಗುತ್ತದೆ.

ರಾತ್ರಿವೇಳೆ ಮಕ್ಕಳಲ್ಲಿ ಕೆಮ್ಮನ್ನು ಕಡಿಮೆ ಮಾಡಿ, ಅವರುಗಳು ಗಾಢವಾಗಿ ಮಲಗಲು ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ಮನುಕುಲಕ್ಕೆ ಪ್ರಕೃತಿಯ ಉಡುಗೊರೆಯೆಂದು ಪರಿಗಣಿಸಲಾಗಿತ್ತು ಹಾಗೂ ಪ್ರತಿಯೊಂದು ಅಡುಗೆಮನೆಯ ಅಗತ್ಯವಾದ ಪದಾರ್ಥವೆಂದು ಸೂಚಿಸಲಾಗಿತ್ತು. ೧೨ ತಿಂಗಳು ಮೇಲ್ಪಟ್ಟ ಯಾರಿಗಾದರೂ, ಆಹಾರದ ಒಂದು ಪ್ರಮುಖ ಅಂಶವಾಗಿ ಪರಿಗಣಿಸಲಾಗುತ್ತಿತ್ತು.

- Advertisement -

Related news

error: Content is protected !!