Monday, April 29, 2024
spot_imgspot_img
spot_imgspot_img

ಮಜ್ಜಿಗೆಯ ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -


ಆಯುರ್ವೇದದಲ್ಲಿ ಕರುಳಿನ ಸಮಸ್ಯೆಗಳಿಗೆ ಮಜ್ಜಿಗೆ ಸೇವನೆಯು ಸಾವಿರಾರು ವರ್ಷಗಳಿಂದ ಸಾಂಪ್ರದಾಯಿಕ ಪರಿಹಾರವಾಗಿದೆ. ಮಜ್ಜಿಗೆ ಮನೆಯಲ್ಲಿ ತಯಾರಿಸಿದ ಪಾನೀಯ. ಇದು ಬಲವಾದ ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮಜ್ಜಿಗೆಯು ಬಾಯಿಯ ಆರೋಗ್ಯ ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟ ಕಡಿಮೆ ಮಾಡುತ್ತದೆ.

ಮಜ್ಜಿಗೆಯಂತಹ ಆರೋಗ್ಯಕಾರಿ ಪಾನೀಯವನ್ನು ಕಡೆಗಣಿಸಿ, ತಂಪು ಪಾನೀಯಗಳನ್ನು ಊಟವಾದ ಬಳಿಕ ಕುಡಿಯುತ್ತಿದ್ದೇವೆ. ಇದು ಆರೋಗ್ಯಕ್ಕೆ ತುಂಬಾ ಮಾರಕ. ಇದರ ಬದಲು ಮಜ್ಜಿಗೆ ಕುಡಿದರೆ ಅದರಿಂದ ದೇಹವು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನೆರವಾಗುವುದು.
ದಿನನಿತ್ಯ ಮಜ್ಜಿಗೆ ಕುಡಿಯುವವರು ನೀವಾಗಿದ್ದರೆ ಸಂತೋಷಪಡಿ. ಆದರೆ ಮಜ್ಜಿಗೆ ಕುಡಿಯದವರು ಇಂದೇ ಕುಡಿಯಲು ಪ್ರಾರಂಭಿಸಿರಿ. ಯಾಕೆ ಎಂದು ಹೇಳುತ್ತೇವೆ. ಪ್ರತಿದಿನ ಕೆಲವೊಂದು ಪದಾರ್ಥ ಗಳನ್ನು, ಪಾನೀಯಗಳನ್ನು ಸೇವಿಸುತ್ತಿದ್ದರು ಅದರ ಪ್ರಯೋಜನ ನಮಗೆ ತಿಳಿದಿರುವುದಿಲ್ಲ. ಆದರೆ ದೊಡ್ಡ ದೊಡ್ಡ ಕಾಯಿಲೆಗಳನ್ನು ಉಪಶಮನ ಮಾಡುವ ತಾಕತ್ತು ಮಜ್ಜಿಗೆಗಿದೆ.

ಆಯುರ್ವೇದದಲ್ಲಿ, ಮಜ್ಜಿಗೆಯನ್ನು ಆರೋಗ್ಯ ಕಾಪಾಡಿಕೊಳ್ಳಲು ಮತ್ತು ರೋಗಗಳ ವಿರುದ್ಧ ಹೋರಾಡಲು ಔಷಧಿಯಾಗಿ ಬಳಸಲಾಗುತ್ತದೆ. ಮಜ್ಜಿಗೆ ಕುಡಿಯುವುದರಿಂದ ಆಹಾರ ಜೀರ್ಣವಾಗುವುದು ಸುಲಭ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಯಲ್ಲಾಗುವ ಕಿರಿಕಿರಿ, ಜಠರಗರುಳಿನ ಕಾಯಿಲೆಗಳು, ಗುಲ್ಮ ಕಾಯಿಲೆಗಳು, ರಕ್ತಹೀನತೆ ಮತ್ತು ಹಸಿವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ.

ಮಜ್ಜಿಗೆ ಸಂಪೂರ್ಣ ಆಹಾರ. ಇದು ಪೌಷ್ಟಿಕ ಮತ್ತು ಸಮತೋಲಿತ ಆಹಾರದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್ ಗಳು, ಕನಿಷ್ಠ ಲಿಪಿಡ್ ಗಳು, ಜೀವಸತ್ವಗಳು ಮತ್ತು ಕಿಣ್ವಗಳನ್ನು ಹೊಂದಿರುತ್ತದೆ. ಮಜ್ಜಿಗೆ ಸೇವಿಸುವುದರಿಂದ ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯಾವುದೇ ರುಚಿಯ ಪಾನೀಯ ಅಥವಾ ಸರಳ ನೀರಿಗಿಂತ ಮಜ್ಜಿಗೆಯನ್ನು ಕುಡಿಯುವುದು ಉತ್ತಮ. ಹುದುಗಿಸಿದ ಮಜ್ಜಿಗೆ ರುಚಿ ಹುಳಿ, ಆದರೆ ಜೈವಿಕವಾಗಿ ಮಾನವ ದೇಹ ಮತ್ತು ಅಂಗಾಂಶಗಳಿಗೆ ಬಹಳ ಪೌಷ್ಟಿಕ ಪಾನೀಯವಾಗಿದೆ. ತ್ವಚೆ ಹಾಗೂ ಕೂದಲಿನ ಸೌಂದರ್ಯಕ್ಕೆ ಒಂದೆರಡು ಗ್ಲಾಸ್ ಮಜ್ಜಿಗೆ ಸಾಕು!

ಮಸಾಲೆಯುಕ್ತ ಆಹಾರ ಸೇವಿಸಿದಾಗ ಖಡ್ಡಾಯವಾಗಿ ಮಜ್ಜಿಗೆ ಕುಡಿಯಿರಿ. ಆಗ ಹೊಟ್ಟೆಯಲ್ಲಿ ಯಾವುದೇ ಕಿರಿಕಿರಿ ಇದ್ದರೂ ನಿವಾರಿಸುತ್ತದೆ. ದೇಹದ ಉಷ್ಣತೆ ಕಡಿಮೆ ಮಾಡಲು ಮಜ್ಜಿಗೆ ಪ್ರಮುಖ ಪಾತ್ರವಹಿಸುತ್ತದೆ. ಹೆಣ್ಣುಮಕ್ಕಳು ಋತುಬಂಧಕ್ಕೆ ಮುಂಚೆ ಮತ್ತು ನಂತರ ಹೆಚ್ಚು ಮಜ್ಜಿಗೆ ಕುಡಿಯಿರಿ. ಮಹಿಳೆಯರಲ್ಲಿ ಕಂಡುಬರುವ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣ.

ಮಜ್ಜಿಗೆಯಲ್ಲಿ ಒಳ್ಳೆಯ ಕೊಬ್ಬು, ಕ್ಯಾಲೊರಿಯಿದೆ. ಆದರೆ ಹಾಲಿಗಿಂತ ಕಡಿಮೆ ಕೊಬ್ಬಿದೆ. ಇದು ಆಸ್ಟಿಯೊಪೊರೋಸಿಸ್ ನಂತಹ ಮೂಳೆ ಕಾಯಿಲೆಗಳನ್ನು ತಡೆಗಟ್ಟುತ್ತದೆ. ವಯಸ್ಸಾದಂತೆ ಮೂಳೆ ಸವೆಯುವುದರಿಂದ ಇದು ಹೊಸ ಮೂಳೆ ಬೆಳವಣಿಗೆಗೆ ಉತ್ತಮ ಪಾನೀಯವಾಗಿದೆ.ಮಜ್ಜಿಗೆಯಲ್ಲಿ ಬಿ ಕಾಂಪ್ಲೆಕ್ಸ್ ವಿಟಮಿನ್, ವಿಟಮಿನ್ ಡಿ ಹೇರಳವಾಗಿದೆ. ಇದರಿಂದ ರಕ್ತಹೀನತೆ ದೂರವಾಗಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಸೋಂಕುಗಗಳು ಹತ್ತಿರ ಸುಳಿಯುವುದಿಲ್ಲ.

ಮಲಬದ್ಧತೆ ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಲು ಮಜ್ಜಿಗೆ ನೈಸರ್ಗಿಕ ಚಿಕಿತ್ಸೆಯಾಗಿದೆ. ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ, ಒಂದು ಲೋಟ ಮಜ್ಜಿಗೆಯನ್ನು ಸೇವಿಸುವುದರಿಂದ ಕರುಳಿನ ಚಲನೆಗೆ ಅನುಕೂಲವಾಗುತ್ತದೆ. ಸಾಕಷ್ಟು ಪ್ರಮಾಣದ ಫೈಬರ್ ಇದರಲ್ಲಿ ಅಡಗಿದೆ.

- Advertisement -

Related news

error: Content is protected !!