Sunday, May 19, 2024
spot_imgspot_img
spot_imgspot_img

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ತಿಂದರೆ ಆರೋಗ್ಯಕ್ಕೆ ಸಿಗುವ ಲಾಭಗಳು

- Advertisement -G L Acharya panikkar
- Advertisement -
This image has an empty alt attribute; its file name is VC_PUC_-1-819x1024.jpg

ತುಳಸಿ ಸಸ್ಯ ಪವಿತ್ರ ಎಂದು ಬಾಲ್ಯದಿಂದಲೂ ನಮಗೆ ತಿಳಿದಿದೆ. ನಾವು ಭಾರತದಲ್ಲಿ ದೇವರಾದ ಕೃಷ್ಣನ ಹೆಸರಿನಿಂದ ತುಳಸಿಯನ್ನು ಪೂಜಿಸುತ್ತೇವೆ, ಪ್ರತಿಯೊಬ್ಬ ಭಾರತೀಯ ಮನೆಯಲ್ಲೂ ತುಳಸಿ ಸಸ್ಯವನ್ನು ಕಾಣಬಹುದು. ಮತ್ತು ಇದು ಎಲ್ಲಾ ರೋಗಗಳಿಗೆ ಸಹಕಾರಿಯಾಗಿದೆ. ಆಯುರ್ವೇದ ಔಷಧಿಗಳ ಮೂಲವೇ ತುಳಸಿ .

ತಜ್ಞರ ಪ್ರಕಾರ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ತಿನ್ನುವುದರಿಂದಲೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಎಳೆಯ ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನಿ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಖಿನ್ನತೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ತುಳಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೋಗಲಾಡಿಸುತ್ತದೆ. ಇದು ಉತ್ತಮ ಆ್ಯಂಟಿಆಕ್ಸಿಡೆಂಟ್‌ ಆಗಿದ್ದು, ಆ್ಯಂಟಿಬ್ಯಾಕ್ಟೀರಿಯಾ ಗುಣಲಕ್ಷಣವನ್ನು ಹೊಂದಿದೆ. ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಸಿಗುವ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯೋ ಇಲ್ಲವೋ, ಆದರೆ ಇದರಿಂದ ದೇಹದೊಳಗಿನ ಹಾಗೂ ಹೊರಗಿನ ಆರೋಗ್ಯಕ್ಕೆ ಹಲವಾರು ಲಾಭಗಳೂ ಇವೆ. ತುಳಸಿ ಎಲೆಗಳಲ್ಲಿ ಚಿಕಿತ್ಸಕ ಗುಣಗಳು ಇದೆ ಎಂದು ಹಿಂದಿನಿಂದಲೂ ಪರಿಗಣಿಸಲಾಗಿದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯವಾಗಿರುವುದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಆಗ ದೇಹದಲ್ಲಿನ ಪಿಎಚ್ ಮಟ್ಟವನ್ನು ಅದು ಕಾಪಾಡುವುದು ಮತ್ತು ದೇಹದಲ್ಲಿ ಆಮ್ಲೀಯತೆಯನ್ನು ಕೂಡ ನಿಯಂತ್ರಣದಲ್ಲಿ ಇಡುವುದು.

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ನರ ವ್ಯವಸ್ಥೆಗೆ ಆರಾಮವಾಗಲು ನೆರವಾಗುವುದು ಮತ್ತು ರಕ್ತ ಸಂಚಾರವು ಸುಧಾರಣೆ ಆಗುವುದು. ಪ್ರತೀ ಎರಡು ದಿನಕ್ಕೊಮ್ಮೆ ಐದು ತುಳಸಿ ಎಲೆಗಳನ್ನು ಸೇವಿಸಿ.

ತುಳಸೀ ರಸವು ಗಂಟಲು ನೋವಿಸನಿಂದ ಹಿಡಿದು ಹೊಟ್ಟೆ ನೋವಿನವರೆಗಿನ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. 10–15 ತುಳಸಿ ಎಲೆಗಳನ್ನು ತೆಗೆದುಕೊಂಡು ಜಜ್ಜಿ ರಸವನ್ನು ತೆಗೆಯಿರಿ. ಆ ರಸವನ್ನು ಒಂದು ಕಪ್‌ ನೀರಿಗೆ ಬೆರೆಸಿ. ಇದು ಹೊಟ್ಟೆಯ ತೊಂದರೆಗಳನ್ನು ದೂರಮಾಡುತ್ತದೆ. ದೇಹದ ತೂಕ ಇಳಿಸಲು ಇದು ಉತ್ತಮವಾಗಿದೆ.

ತುಳಸಿ ಎಲೆಗಳಲ್ಲಿ ಇರುವಂತಹ ಯುಜೆನಾಲ್ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಟ್ಟು ಹೃದಯವನ್ನು ಕಾಪಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದು ಕಾಯಿಲೆಗಳಿಂದ ಹೃದಯವನ್ನು ರಕ್ಷಣೆ ಮಾಡುವುದು

- Advertisement -

Related news

error: Content is protected !!