Thursday, May 2, 2024
spot_imgspot_img
spot_imgspot_img

ಮೊಟ್ಟೆಯ ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -

ಮೊಟ್ಟೆ ಒಂದು ಸೂಪರ್ ಫುಡ್. ಇದು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ದೇಹದ ಉತ್ತಮ ಕಾರ್ಯ ಚಟುವಟಿಕೆಗೆ ಸಹಾಯ ಮಾಡುತ್ತದೆ. ದಿನವೂ ಬೇಯಿಸಿದ ಮೊಟ್ಟೆ ತಿನ್ನುವುದು ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ

ಮೊಟ್ಟೆಗಳ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಉತ್ತಮ. ಮೊಟ್ಟೆಗಳಲ್ಲಿ ಪ್ರೋಟೀನ್, ವಿಟಮಿನ್ ಬಿ 6, ಬಿ 12 ಮತ್ತು ವಿಟಮಿನ್ ಡಿ, ಕ್ಯಾಲ್ಸಿಯಂ, ಸತು, ಸೆಲೆನಿಯಮ್ ಮತ್ತು ಫೋಲೇಟ್‌ ಇದೆ. ಮೊಟ್ಟೆಗಳಲ್ಲಿರುವ ಪೋಷಕಾಂಶಗಳು ಹೃದಯದ ಆರೋಗ್ಯ ಸುಧಾರಿಸುತ್ತವೆ ಅಂತಾರೆ ತಜ್ಞರು.

ವಾರಕ್ಕೆ ಮೂರು ಮೊಟ್ಟೆ ಸೇವನೆ ಮಾಡಿದರೆ ಹೃದಯ ರಕ್ತನಾಳದ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ. ವಾರಕ್ಕೆ ನಾಲ್ಕರಿಂದ ಏಳು ಮೊಟ್ಟೆ ಸೇವನೆ ಮಾಡುವುದು ಹೃದಯ ರಕ್ತನಾಳದ ಕಾಯಿಲೆ ಅಪಾಯವನ್ನು 75 ಪ್ರತಿಶತ ಕಡಿಮೆ ಆಗುತ್ತದೆ. ವಾರಕ್ಕೆ ಮೂರು ಮೊಟ್ಟೆಗಳ ಸೇವನೆ ಮಾಡುವುದು ಪ್ರಯೋಜನಕಾರಿ ಆಗಿದೆ.

ಮೊಟ್ಟೆಗಳು ಹೃದಯಕ್ಕೆ ಆರೋಗ್ಯಕರ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಇದರಲ್ಲಿ ಕ್ಯಾರೊಟಿನಾಯ್ಡ್ ಹೀರಿಕೊಳ್ಳುವಿಕೆ ಉತ್ತೇಜಿಸುವ ಕೆಲಸವಾಗುತ್ತದೆ. ಇದು ಉತ್ತಮ ಕೊಲೆಸ್ಟ್ರಾಲ್ ಮತ್ತು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಹೆಚ್ಚಿಸುತ್ತದೆ. ಇದು ಅಪಧಮನಿಕಾಠಿಣ್ಯ, ಕೊಬ್ಬು, ಕೊಲೆಸ್ಟ್ರಾಲ್ ತಡೆಯುತ್ತದೆ.

ಮೊಟ್ಟೆಯಲ್ಲಿ ಹೃದಯದ ಆರೋಗ್ಯ ಹೆಚ್ಚಿಸುವ ಪೋಷಕಾಂಶಗಳಿವೆ. ಪ್ರೋಟೀನ್, ಖನಿಜಗಳು, ಜೀವಸತ್ವಗಳು ಮತ್ತು ಕಬ್ಬಿಣವಿದೆ. ವಿಟಮಿನ್ ಬಿ 12 ಮತ್ತು ಸೆಲೆನಿಯಂ ಇದೆ. ಹೃದಯ ರಕ್ತನಾಳಕ್ಕೆ ರಕ್ಷಣೆ ನೀಡುತ್ತದೆ. ಮೊಟ್ಟೆಯಲ್ಲಿರುವ ಸೆಲೆನಿಯಮ್ ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಕಾರಿ.

- Advertisement -

Related news

error: Content is protected !!