Saturday, May 4, 2024
spot_imgspot_img
spot_imgspot_img

ನೆಲ್ಲಿಕಾಯಿಯ ಆರೋಗ್ಯ ಪ್ರಯೋಜನ

- Advertisement -G L Acharya panikkar
- Advertisement -

ನೆಲ್ಲಿಕಾಯಿ ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ. ಆದರೂ, ನೆಲ್ಲಿ ನೋಡಿದರೆ ಏನೋ ಒಂದು ತರಹ ಅಸಡ್ಡೆ. ಈ ವರದಿ ಓದಿದ ಮೇಲೆ ನೆಲ್ಲಿಕಾಯಿಯ ಕುರಿತ ನಿಮ್ಮ ನಿಲುವು ಬದಲಾಗುವುದು ಖಚಿತ. ಇದು ಆರೋಗ್ಯ ಸಂಜೀವಿನಿ. ಹಲವು ಕಾಯಿಲೆಗಳಿಗೆ ರಾಮಬಾಣ. ಕ್ಯಾಲ್ಸಿಯಂ, ಕಬ್ಬಿಣಂಶ, ಫೈಬರ್, ಪಾಸ್ಪರಸ್, ಕಾರ್ಬೋಹೈಡ್ರೇಟ್, ವಿಟಮಿನ್, ಕೆರಾಟಿನ್, ಖನಿಜ, ಸತ್ವ, ಫಾಲಿಫೆನೆಲ್ ಗಳಿಂದ ಭರ್ಜರಿಯಾಗಿ ಸಮೃದ್ದವಾಗಿದೆ ನೆಲ್ಲಿಕಾಯಿ.

ನೆಲ್ಲಿಯಲ್ಲಿ ಅಂಟಿ ಅಕ್ಸಿಡೆಂಟ್ ಗುಣಗಳಿವೆ. ಇವು ಕ್ಯಾನ್ಸರ್ ಕಾರಕ ಕೋಶಗಳನ್ನು ಅವುಗಳ ಮೂಲದಲ್ಲೇ ಕೊಲ್ಲುತ್ತದೆ. ಹಾಗಾಗಿ ಇದು ಕ್ಯಾನ್ಸರ್ ಕಿಲ್ಲರ್ .ನೆಲ್ಲಿಯಲ್ಲಿರುವ ಸತ್ವಗಳು ನಮ್ಮ ಜೀರ್ಣಾಂಗ ವ್ಯೂಹವನ್ನು ಬಲಪಡಿಸುತ್ತದೆ. ಅದರಲ್ಲಿ ಸಾಕಷ್ಟು ಫೈಬರ್ ಇರುವ ಕಾರಣ ನೆಲ್ಲಿ ತಿಂದರೆ ಹೊಟ್ಟೆಯಲ್ಲಿ ಆಹಾರ ಸರಾಗವಾಗಿ ಜೀರ್ಣವಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸೇರಿದ ಎಲ್ಲಾ ಕಾಯಿಲೆಗಳೂ ಮಾಯವಾಗುತ್ತದೆ.

ನೆಲ್ಲಿ ಕಾಯಿ ಚರ್ಮದ ಆರೋಗ್ಯಕ್ಕೆ ಬಹಳಷ್ಟು ಸಹಕಾರಿ. ನೆಲ್ಲಿ ತಿಂದರೆ ಚರ್ಮದ ಹೊಳಪು ಚೆನ್ನಾಗಿ ಬರುತ್ತದೆ. ನೆಲ್ಲಿಯಲ್ಲಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ. ಹಾಗಾಗಿ, ನೆಲ್ಲಿ ತಿಂದರೆ ಸಹಜವಾಗಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನೆಲ್ಲಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆರಾಟಿನ್ ಕಂಡು ಬರುತ್ತದೆ. ಕೆರಾಟಿನ್ ಕಣ್ಣಿನ ಆರೋಗ್ಯಕ್ಕೆ ಸಾಕಷ್ಟು ಸಹಕಾರಿ. ಇವು ದೃಷ್ಟಿದೋಷ ನಿವಾರಿಸುತ್ತದೆ.

ನೆಲ್ಲಿಯನ್ನು ಹೀಗೆ ತಿನ್ನಲು ನಿಮಗೆ ಕಷ್ಟವಾಗುವುದಾದರೆ ಬೇರೆ ಬೇರೆ ವಿಧದಲ್ಲಿ ಖಾದ್ಯ ಮಾಡಿ ನೆಲ್ಲಿಯನ್ನು ಸೇವಿಸಬಹುದು. ನೆಲ್ಲಿಯ ಬೀಜ ತೆಗೆದು ಕಟ್ ಮಾಡಿ ಜ್ಯೂಸ್ ಮಾಡಿ ಕುಡಿಯಬಹುದು. ಸಲಾಡ್‌ ಮಾಡಿ ಅದರ ಜೊತೆ ನೆಲ್ಲಿ ಸೇರಿಸಿ ತಿನ್ನಬಹುದು. ಚಟ್ನಿ ಮಾಡಿ ಸೇವಿಸಬಹುದು. ನೆಲ್ಲಿಗೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಜಾಮ್ ಮಾಡಿ ತಿನ್ನಬಹುದು.

- Advertisement -

Related news

error: Content is protected !!