Tuesday, May 7, 2024
spot_imgspot_img
spot_imgspot_img

ಬೆಲ್ಲದ ಆರೋಗ್ಯಕರ ಗುಣಗಳು

- Advertisement -G L Acharya panikkar
- Advertisement -

ಒಂದು ತುಂಡು ಬೆಲ್ಲವನ್ನು ದಿನಾ ಸವಿಯುವುದರಿಂದ ಎಷ್ಟೊಂದು ಆರೋಗ್ಯಕರ ಗುಣಗಳಿವೆಯೆಂದು ಗೊತ್ತಿದೆಯೇ? ಬೆಲ್ಲದ ಗುಣಗಳ ಬಗ್ಗೆ ತಿಳಿದವರು ದಿನಾ ಒಂದು ತುಂಡು ಬೆಲ್ಲ ಬಾಯಿಗೆ ಹಾಕಿ ಬಾಯಿ ಸಿಹಿಯಾಗಿಸಲು ಮರೆಯಲ್ಲ ನೋಡಿ.

ಈ ಸಿಹಿ ವಸ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ, ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು.ಬೆಲ್ಲ ಹೊಟ್ಟೆಯನ್ನು ತಂಪಾಗಿಸುತ್ತದೆ.

ರಕ್ತಹೀನತೆ ಇರುವವರಿಗೆ ಬೆಲ್ಲ ಸೇವನೆ ಅತ್ಯುತ್ತಮ. ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ. ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು.

ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ. ಇದು ಮೊಡವೆಯನ್ನು ಕಡಿಮೆಗೊಳಿಸುತ್ತದೆ. ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ. ಗಂಟಲು ಕೆರೆತ, ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.
ನಿಯಮಿತವಾದ ಬೆಲ್ಲದ ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ. ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ.

ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ. ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲವನ್ನು ಸೇವಿಸುವುದರಿಂದ ನೋವು ಕಡಿಮೆಯಾಗುವುದು.

- Advertisement -

Related news

error: Content is protected !!