Wednesday, July 2, 2025
spot_imgspot_img
spot_imgspot_img

ಮೈಗ್ರೇನ್ ಸಮಸ್ಯೆ ಇದೆಯೇ? ಇಲ್ಲಿದೆ ಪರಿಹಾರ

- Advertisement -
- Advertisement -

ರಾಗಿಯು ಮೈಗ್ರೇನ್ ತಲೆನೋವಿಗೆ ಉತ್ತಮ ಉಪಶಮನವಾಗಿದೆ. ರಾಗಿಯಲ್ಲಿ ಕ್ಯಾಲ್ಶಿಯಂ ಹಾಲು ಪುಷ್ಕಳವಾಗಿದೆ. 100 ಗ್ರಾಂ ರಾಗಿಯಲ್ಲಿ 344 ಮಿಲಿ ಗ್ರಾಂ ಕ್ಯಾಲ್ಸಿಯಂ ಇದೆ. ರಾಗಿಯ ಮೇಲು ಹೊಟ್ಟಿನಲ್ಲಿ ಪಾಲಿಫಿನಾಲ್ ಎಂಬ ಪೋಷಕಾಂಶ, ಡಯಟರಿ ನಾರಿನಂಶ ಹೆಚ್ಚು.

ಅವು ನಮ್ಮ ಆಹಾರವನ್ನು ನಿಧಾನವಾಗಿ ಜೀರ್ಣ ಮಾಡುತ್ತದೆ. ಇದರಿಂದಾಗಿ ನಮ್ಮ ಆಹಾರದಲ್ಲಿರುವ ಸಕ್ಕರೆಯು ನೆಮ್ಮದಿಯಿಂದ ಬಿಡುಗಡೆಯಾಗುತ್ತದೆ. ಹಾಗಾಗಿ ಸಕ್ಕರೆಯು ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ಡಯಾಬಿಟಿಸ್ ಇರುವವರಿಗೆ ರಾಗಿ ಉತ್ತಮ ಆಹಾರವಾಗಿದೆ. ಇನ್ನು ನಾರು ಸತ್ವದಿಂದಾಗಿ ನಮ್ಮ ಜೀರ್ಣ ವ್ಯವಸ್ಥೆ ಚೊಕ್ಕವಾಗಿರುವುದಲ್ಲದೆ ಮಲಬದ್ಧತೆಯಂತಹ ತೊಂದರೆ ಇರುವುದಿಲ್ಲ.

ರಾಗಿ ಸೇವಿಸುವವರ ಚರ್ಮ ಹೊಳಪಿನಿಂದ ಕೂಡಿರುತ್ತದೆ. ವಯಸ್ಸಿನ ಚಿಹ್ನೆಗಳನ್ನು ಇದು ನಿಧಾನಗೊಳಿಸುತ್ತದೆ. ಹೀಗಾಗಿ ದೀರ್ಘಕಾಲದವರೆಗೆ ಯೌವನದಿಂದ ಇರುವಂತೆ ಇದು ಸಾಧ್ಯ ಮಾಡುತ್ತದೆ. ರಾಗಿಯಲ್ಲಿ ಸ್ವಾಭಾವಿಕ ಕಬ್ಬಿಣಾಂಶ ಹೆಚ್ಚು. ಆದ್ದರಿಂದ ರಕ್ತಹೀನತೆಯ ರೋಗಿಗಳಿಗೆ ರಾಗಿಯಿಂದ ಮಾಡಿದ ಆಹಾರಗಳನ್ನು ಶಿಫಾರಸ್ಸು ಮಾಡಲಾಗುತ್ತದೆ.

ರಾಗಿಯನ್ನು ಸ್ಪಾಟ್ಸ್ ಮಾಡಿದರೆ ಅದರಲ್ಲಿ ಅಧಿಕ ವಿಟಮಿನ್ ಸಿ ಸಿಗುತ್ತದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರೊಂದಿಗೆ ಕಬ್ಬಿಣಾಂಶ ಚೆನ್ನಾಗಿ ದೇಹಕ್ಕೆ ಸೇರುವಂತೆ ಮಾಡುತ್ತದೆ.

driving

ರಾಗಿ ತಿನ್ನುವವರಲ್ಲಿ ಆಂಗ್ ಸೈಟಿ, ಡಿಪ್ರೆಶನ್, ನಿದ್ರಾಹೀನತೆಯಂತಹ ಮನೋ ಸಮಸ್ಯೆಗಳು ಇರುವುದಿಲ್ಲ. ಇದು ಬೊಜ್ಜು ತೊಂದರೆ ಇರುವವರಿಗೆ ಉತ್ತಮ ಆಹಾರವಾಗಿದೆ.

- Advertisement -

Related news

error: Content is protected !!