Friday, June 5, 2026
spot_imgspot_img
spot_imgspot_img

ಕೇಪು: ಸಿಡಿಲು ಬಡಿದು ಮನೆಗೆ ಹಾನಿ : ಅದೃಷ್ಟವಶಾತ್‌ ಮನೆಮಂದಿ ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಕೇಪು: ಮನೆಯೊಂದಕ್ಕೆ ಸಿಡಿಲು ಬಡಿದು ಮನೆಯೊಳಗಿನ ಸೊತ್ತುಗಳೆಲ್ಲ ಹಾನಿಗೊಂಡು, ಅದೃಷ್ಟವಶಾತ್‌ ಮನೆಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಕೇಪು ಗ್ರಾಮದ ಚೆಲ್ಲಡ್ಕ ಎಂಬಲ್ಲಿ ನಡೆದಿದೆ.

ಚೆಲ್ಲಡ್ಕ ಶಶಿಶೇಖರ ಭಂಡಾರಿ ಎಂಬವರ ಮನೆಗೆ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಸಿಡಿಲು ಬಡಿದು ಮನೆಯೊಳಗಿದ್ದ ಫ್ರಿಡ್ಜ್‌, ಗ್ರಯಿಂಡರ್‌ , ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಬೆಂಕಿ ಹೊತ್ತಿ ಉರಿದು ಸಂಪೂರ್ಣವಾಗಿ ಸುಟ್ಟುಹೋಗಿರುತ್ತದೆ. ಬೆಂಕಿಯ ತೀವ್ರತೆಯು ಹೆಚ್ಚಾಗಿ ಮನೆಯ ಒಂದು ಬದಿಗೆ ಬಂಕಿ ತಗುಲಿ ಉರಿದಿದ್ದು, ಸ್ಥಳಿಯ ಯುವಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಅದಾಗಲೇ ಅಗ್ನಿ ಶಾಮಕ ದಳದವರು ಸ್ಥಳಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಸಮಯದಲ್ಲಿ ಮನೆಯೊಳಗೆ ಶಶಿಶೇಖರ ಭಂಡಾರಿ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ರಾಜೀವ್‌ ಭಂಡಾರಿ ಕುಂಡಕೋಳಿ, ರಾದಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಜಗಜೀವನ ರಾಮ್‌ ಶೆಟ್ಟಿ ಮೈರ, ರಾಘವ ಸಾರಡ್ಕ, ಪುರುಷೋತ್ತಮ ಕಲ್ಲಂಗಳ, ಪಿ.ಡಿ.ಒ ಗೋಕುಲದಾಸ್‌ ಭಕ್ತ V.A.ಆಫೀಸಿನ ಮಿ.ಗಣೇಶ್‌ ಪ್ರಭು ಹಾಗೂ ಕೇಪು ಗ್ರಾಮ ಸಹಾಯಕರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!