ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಪ್ರವಾಹ ಉಂಟಾಗಿದ್ದು, ಹಲವಾರು ನಗರಗಳು ಮುಳುಗಡೆಯಾಗಿದೆ. ಕಳೆದ 12 ಗಂಟೆಗಳಲ್ಲಿ 294 ಮಿ.ಮೀ ಮಳೆಯಾಗಿದ್ದು, 46 ವರ್ಷದ ದಾಖಲೆ ಮುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ 3-4 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ:
ಮುಂಬೈ ನಗರ ಮತ್ತು ಉಪನಗರಗಳು ಮುಂದಿನ 3-4 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ 60-70 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುತ್ತದೆ. ಕೆಲವು ಪ್ರದೇಶಗಳಲ್ಲಿ ಗುಡುಗು ಮಿಂಚಿನ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಿಡ್ಜ್ ರಸ್ತೆಯ ಗೋಡೆ ಕುಸಿತ:
ಮುಂಬಯಿಯ ಎನ್ಎಸ್ ಪಟ್ಕರ್ ಮಾರ್ಗದಲ್ಲಿ ರಿಡ್ಜ್ ರಸ್ತೆಯ ಗೋಡೆಯ ಭಾಗ ಭಾರಿ ಮಳೆಯಿಂದಾಗಿ ಕುಸಿದಿದೆ. ಹೀಗಾಗಿ ರಸ್ತೆಯ ಎರಡೂ ಬದಿಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಜೆಜೆ ಆಸ್ಪತ್ರೆಯಲ್ಲಿ ನೀರು ತೆರವು:
ನಿರಂತರ ಮಳೆಯಿಂದಾಗಿ ಬುಧವಾರ ಸಂಜೆ ಜೆಜೆ ಆಸ್ಪತ್ರೆಗೆ ನೀರು ಪ್ರವೇಶಿಸಿ, ರೋಗಿಗಳು ಪರದಾಡುವಂತಾಗಿತ್ತು. ಆದರೆ ಈಗ ಆಸ್ಪತ್ರೆಯೊಳಗೆ ಪ್ರವೇಶಿಸಿದ ನೀರನ್ನು ಹೊರಸೂಸಲಾಗಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮಾಹಿತಿ ನೀಡಿದ್ದು, ಈಗ ಆಸ್ಪತ್ರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ ಎಂದು ತಿಳಿಸಿದೆ.
ದಹಾನುವಿನಲ್ಲಿ 75 ವರ್ಷಗಳ ದಾಖಲೆ ಮುರಿದ ಮಳೆ:
1945 ರಲ್ಲಿ 383 ಮಿ.ಮೀ ಮಳೆಯಾದ ನಂತರ ದಹಾನುವಿನಲ್ಲಿ 75 ವರ್ಷಗಳ ದಾಖಲೆಯನ್ನು ವರುಣ ಮುರಿದಿದ್ದಾನೆ. ಇದು 1945 ರಲ್ಲಿ ಹಿಂದಿನ 355 ಮಿ.ಮೀ ಮಳೆ ದಾಖಲೆಯನ್ನು ಮೀರಿತ್ತು. ಕರಾವಳಿ ಪಟ್ಟಣವಾದ ದಹಾನುವಿನಲ್ಲಿ ಮಳೆ ತೀವ್ರತೆ ಹೆಚ್ಚಾಗಿದೆ. ಜಿಲ್ಲಾಡಳಿತ ಬುಧವಾರ ಮತ್ತು ಗುರುವಾರ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಹಲವಾರು ಗ್ರಾಮಗಳು, ರಸ್ತೆಗಳು ಮತ್ತು ಸೇತುವೆಗಳು ನೀರಿನಲ್ಲಿ ಮುಳುಗಿವೆ. ದಹನುವಿನ ಧರಂಪುರ ಗ್ರಾಮದಲ್ಲಿ, ದಡದಲ್ಲಿ ಲಂಗರು ಹಾಕಿದ ಸುಮಾರು 15 ಸಣ್ಣ ದೋಣಿಗಳು ಕೊಚ್ಚಿ ಹೋಗಿವೆ. ಗ್ರಾಮಸ್ಥರನ್ನು ನದಿಗೆ ಅಡ್ಡಲಾಗಿ ಸಾಗಿಸಲು ದೋಣಿಗಳನ್ನು ಬಳಸಲಾಗುತ್ತಿತ್ತು.ಆದರೆ ಇವೆಲ್ಲವೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ.
Floating Vehicles #mumbairain #Mumbaikars ?️?️????️ pic.twitter.com/707NWsX23I
— Kishor ✨™ (@kishorshah_) August 5, 2020
2 ರೈಲುಗಳಲಿದ್ದ 290 ಪ್ರಯಾಣಿಕರ ರಕ್ಷಣೆ:
ಭಾರೀ ಮಳೆಯಿಂದಾಗಿ 2 ಲೋಕಲ್ ಟ್ರೈನ್ ಗಳು ಸಿಲುಕಿಕೊಂಡಿವೆ. ರೈಲು ಹಳಿಗಳು ಜಲಾವೃತಗೊಂಡ ಕಾರಣ ಸಂಚಾರಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ರೈಲಿನಲ್ಲಿ ಸಿಲುಕಿದ್ದ 290 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ಕೊಚ್ಚಿ ಹೋಗ್ತಿವೆ ವಾಹನಗಳು:
ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತವಾಗಿದೆ. ಹೀಗಾಗಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಕೊಚ್ಚಿ ಹೋಗ್ತಿವೆ. ನೀರಿನ ಮಟ್ಟ ಹೆಚ್ಚಾಗಿರುವುದರಿಂದ ವಾಹನಗಳು ತೇಲಾಡುತ್ತಿವೆ.