Monday, May 13, 2024
spot_imgspot_img
spot_imgspot_img

ಉಡುಪಿ: ಓವರ್‌ಟೇಕ್‌ ಭರದಲ್ಲಿ ಸರಣಿ ಅಪಘಾತ; ನಾಲ್ವರಿಗೆ ಗಾಯ

- Advertisement -G L Acharya panikkar
- Advertisement -

ಉಡುಪಿ: ಕಾರೊಂದು ಬೈಕ್ ನ್ನು ಓವರ್ ಟೇಕ್ ಮಾಡುವಾಗ ಮುಂದಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ನಾಡ್ಪಾಲು ಜಕ್ಕನಮಕ್ಕಿ ಎಂಬಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದು, ಕಾರುಗಳು ಹಾಗೂ ಬೈಕ್ ನುಜ್ಜುಗುಜ್ಜಾಗಿದೆ.

ಅಪಘಾತದಿಂದ ಉಡುಪಿ-ಹೆಬ್ರಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!