- Advertisement -
- Advertisement -


ಕಾಸರಗೋಡು: ನಗರದ ಎಟಿಎಂ ಕೌಂಟರ್ ನಲ್ಲಿ ಬಾಗಿಲು ಲಾಕ್ ಆಗಿ ತಾಯಿ ಮತ್ತು ಮಗಳು ಸಿಲುಕಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಚೇರಂಗೈ ನಿವಾಸಿಯಾದ ಮಹಿಳೆ ಮತ್ತು ಆಕೆಯ ಎಂಟು ವರ್ಷದ ಪುತ್ರಿ ನಗರದ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಎಟಿಎಂಗೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಹಣ ತೆಗೆಯಲು ಕೌಂಟರ್ ನೊಳಗೆ ತೆರಳಿದ್ದ ಮರಳುತ್ತಿದ್ದಾಗ ಬಾಗಿಲು ಲಾಕ್ ಆಗಿದ್ದು, ಇಬ್ಬರು ಬೊಬ್ಬೆ ಹಾಕಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದವರು ಕೂಡಲೇ ಸಮೀಪದ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ತಲಪಿ ಬಳಿಕ ಅಗ್ನಿ ಶಾಮಕ ದಳದವ ರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತಲಪಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಎಟಿಎಂನ ಬಾಗಿಲು ಯಂತ್ರದ ಮೂಲಕ ತುಂಡರಿಸಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.
- Advertisement -