Thursday, June 18, 2026
spot_imgspot_img
spot_imgspot_img

ಐಎನ್‌ಎಸ್ ಗರುಡ ರನ್‌ವೇಯಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಪತನ – ಓರ್ವ ಸಿಬ್ಬಂದಿ ಸಾವು

- Advertisement -
- Advertisement -
This image has an empty alt attribute; its file name is balavikas-866x1024.jpg

ನೌಕಾ ವಾಯು ನಿಲ್ದಾಣದ ಐಎನ್‌ಎಸ್ ಗರುಡಾ ರನ್‌ವೇಯಲ್ಲಿ ಚೇತಕ್ ಹೆಲಿಕಾಪ್ಟರ್‌ವೊಂದು ಪತನಗೊಂಡಿದ್ದು, ಘಟನೆಯಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ.

ದುರ್ಘಟನೆಯಲ್ಲಿ ಏರ್‌ಮ್ಯಾನ್ ಯೋಗೇಂದ್ರ ಸಿಂಗ್ ಹುತಾತ್ಮರಾಗಿದ್ದಾರೆ.ಕೊಚ್ಚಿಯ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿರುವ ಐಎನ್‌ಎಸ್ ಗರುಡ ರನ್‌ವೇಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಧ್ಯಾಹ್ನ 2.30ರ ಸುಮಾರಿಗೆ ದಿನನಿತ್ಯದ ತರಬೇತಿ ವೇಳೆ ಚೇತಕ್ ಹೆಲಿಕಾಪ್ಟರ್ ಪತನಗೊಂಡಿದೆ. ಅಪಘಾತದಲ್ಲಿ ಹೆಲಿಕಾಪ್ಟರ್‌ನ ಪೈಲಟ್ ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ ಎಂದು ಆರಂಭಿಕ ಮಾಹಿತಿ ತಿಳಿಸಿದೆ. ಗಾಯಾಳುಗಳು ನೌಕಾ ಕೇಂದ್ರದ ಸಂಜೀವನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ಯಾಗಿದೆ.

- Advertisement -

Related news

error: Content is protected !!