Sunday, May 5, 2024
spot_imgspot_img
spot_imgspot_img

ಹಿರಿಯ ನಟಿ ಹೇಮಾ ಚೌಧರಿ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

- Advertisement -G L Acharya panikkar
- Advertisement -

ಹೆಸರಾಂತ ಹಿರಿಯ ನಟಿ ಹೇಮಾ ಚೌಧುರಿ ಅವರು ಬ್ರೈನ್ ಹ್ಯಾಮರೆಜ್ ಆಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್‌ ಆಗಿತ್ತು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೇಮಾ ಅವರ ಮಗ ಐರ್ಲೆಂಡ್​ನಲ್ಲಿ ಇದ್ದಾರೆ. ಅವರ ಆಗಮನಕ್ಕಾಗಿ ಕಾಯಲಾಗುತ್ತಿದೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಹಿರಿಯ ನಟಿ ಶೀಘ್ರ ಗುಣಮುಖರಾಗಿ ಮೊದಲಿನಂತಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇತ್ತೀಚೆಗೆ ನಿಧನರಾದ ಹಿರಿಯ ನಟಿ ಲೀಲಾವತಿ ಅವರ ಪುಣ್ಯತಿಥಿಗೆ ಹೇಮಾ ಚೌಧರಿಯವರು ಬಂದಿದ್ದರು. ಅದಾದ ನಂತರ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯ ಉಂಟಾಗಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು ಹೀಗೆ ನಾನಾ ಭಾಷೆಗಳಲ್ಲಿ ಹೇಮಾ ಚೌಧರಿ ನಟಿಸಿದ್ದಾರೆ.

- Advertisement -

Related news

error: Content is protected !!