Saturday, June 28, 2025
spot_imgspot_img
spot_imgspot_img

ಉತ್ತರ ಇಸ್ರೇಲ್‌ನ ಸೇನಾ ನೆಲೆಗಳ ಮೇಲೆ ಹಿಜ್ಬುಲ್ಲಾ ಉಗ್ರರ ಡ್ರೋನ್‌ ದಾಳಿ : 19 ಮಂದಿಗೆ ಗಂಭೀರ ಗಾಯ

- Advertisement -
- Advertisement -

ಮಂಗಳವಾರ ಉತ್ತರ ಇಸ್ರೇಲ್‌ನಲ್ಲಿ ಸೇನಾ ಗುರಿಗಳ ಡ್ರೋನ್‌ ದಾಳಿ ನಡೆಸಿರುವುದಾಗಿ ಲೆಬನಾನ್‌ ಉಗ್ರಪಡೆ ಹಿಜ್ಬುಲ್ಲಾ ಹೇಳಿದೆ. ಇಸ್ರೇಲ್‌ ತನ್ನ ಕಮಾಂಡರ್‌ ಫುವಾದ್ ಶುಕ್ರ್‌ನನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದ್ದರೂ, ಹಿಜ್ಬುಲ್ಲಾ ಮಾತ್ರ ಇದನ್ನು ನಿರಾಕರಿಸಿದೆ.

ಲೆಬನಾನ್‌ನ ಸಶಸ್ತ್ರ ಗುಂಪು ಹಿಜ್ಬುಲ್ಲಾ ಮಂಗಳವಾರ ಉತ್ತರ ಇಸ್ರೇಲ್‌ಗೆ ಡ್ರೋನ್ ಮತ್ತು ರಾಕೆಟ್‌ಗಳ ಮೂಲಕ ಸರಣಿ ದಾಳಿ ನಡೆಸಿದೆ. ಆದರೆ, ಇದು ಕಳೆದ ವಾರ ಇಸ್ರೇಲ್‌ ತನ್ನ ಕಮಾಂಡರ್‌ ಫುವಾದ್‌ ಶುಕ್ರ್‌ನನ್ನು ಕೊಂದಿದ್ದಕ್ಕೆ ಪ್ರತೀಕಾರವಲ್ಲ ಎಂದು ತಿಳಿಸಿದೆ. ಶುಕ್ರ್‌ನನ್ನು ಕೊಂದಿದ್ದಕ್ಕೆ ಭೀಕರ ಪ್ರತೀಕಾರ ಇನ್ನಷ್ಟೇ ಬರಲಿದೆ ಎಂದು ಎಚ್ಚರಿಕೆ ನೀಡಿದೆ.

ಉತ್ತರ ಇಸ್ರೇಲ್‌ನ ಎಕ್ರೆ ಬಳಿಯ ಎರಡು ಮಿಲಿಟರಿ ತಾಣಗಳಲ್ಲಿ ಸರಣಿ ಡ್ರೋನ್‌ ದಾಳಿಳನ್ನು ಮಾಡಲಾಗಿದೆ. ಇನ್ನೊಂದು ಸ್ಥಳದಲ್ಲಿ ಇಸ್ರೇಲಿ ಮಿಲಿಟರಿ ವಾಹನದ ಮೇಲೆ ದಾಳಿ ಮಾಡಿದೆ ಎಂದು ಹಿಜ್ಬುಲ್ಲಾ ಮಾಹಿತಿ ನೀಡಿದೆ. ಸಾಕಷ್ಟು ಡ್ರೋನ್‌ಗಳು ಗಡಿ ದಾಟುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ಲೆಬನಾನ್‌ನಿಂದ ಈ ಡ್ರೋನ್‌ಗಳು ಬರುತ್ತಿದ್ದು, ಒಂದನ್ನು ಇಂಟರ್‌ಸೆಪ್ಟ್‌ ಮಾಡಲಾಗಿದೆ ಎಂದು ತಿಳಿಸಿದೆ.

ಹಿಜ್ಬುಲ್ಲಾ ಡ್ರೋನ್ ದಾಳಿಯ ನಂತರ ಹತ್ತೊಂಬತ್ತು ಜನರು ಮಂಗಳವಾರ ಗಾಯಗೊಂಡರು. ಅವರಲ್ಲಿ ಒಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಐರನ್ ಡೋಮ್ ಇಂಟರ್ಸೆಪ್ಟರ್ ಕ್ಷಿಪಣಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಪರಿಣಾಮವಾಗಿ ಘಟನೆ ಸಂಭವಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ನಂತರ ತಿಳಿಸಿವೆ.

- Advertisement -

Related news

error: Content is protected !!