Wednesday, April 24, 2024
spot_imgspot_img
spot_imgspot_img

ಕರಾವಳಿ ಸಮುದ್ರದಲ್ಲಿ ಬಲೆಗೆ ಬಿದ್ದ ಅಪರೂಪದ ಸನ್ ಫಿಶ್‌

- Advertisement -G L Acharya panikkar
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೊಡ ಟೊಂಕಾದಲ್ಲಿ ಲಲಿತಾ ಕಂಪನಿಯ ಜಗದೀಶ್ ತಾಂಡೇಲರ ‘ಪ್ರೀಶಾ’ ಬೋಟಿಗೆ 15 ಕೆಜಿ ತೂಕದ ವಿರಳವಾಗಿ ಸಿಗುವ ಸನ್ ಫಿಶ್‌ ಬಲೆಗೆ ಬಿದ್ದಿದೆ.

ಕರ್ನಾಟಕ ಕರಾವಳಿ ಭಾಗದಲ್ಲಿ ಈ ಮೀನು ಅಪರೂಪಕ್ಕೆ ಮೀನುಗಾರರ ಬಲೆಗೆ ಬೀಳುತ್ತವೆ. ಇಷ್ಟು ವರ್ಷದಲ್ಲಿ ಒಂದೆರೆಡು ಬಾರಿ ಮಾತ್ರ ಮೀನುಗಾರರ ಬಲೆಗೆ ಬಿದ್ದಿರುವ ಕುರಿತು ಕಡಲ ವಿಜ್ಞಾನಿಗಳು ದಾಖಲಿಸಿದ್ದಾಗಿ ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ತಜ್ಞ ಶಿವಕುಮಾರ್ ಹರಗಿಯವರು ಮಾಹಿತಿ ನೀಡಿದ್ದಾರೆ.

ಇದರ ವೈಜ್ಞಾನಿಕ ಹೆಸರು Mola mola ಎಂದಾಗಿದ್ದು ಸನ್ ಫಿಶ್‌ ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ. ವಿಶ್ವದಲ್ಲೇ ಅತೀ ಹೆಚ್ಚು ಮೂಳೆಗಳನ್ನು ಹೊಂದಿರುವ ಮೀನು ಇದಾಗಿದ್ದು ಸಾಮಾನ್ಯ ಮೀನಿನಂತೆ ಬಾಲ ಇರುವುದಿಲ್ಲ. ಬಹುತೇಕ ದೇಹವು ಮೂಳೆಯಿಂದ ಕೂಡಿರುತ್ತದೆ. ಮೂಳೆಗಳು ಹೆಚ್ಚಿರುವುದರಿಂದ ಇವು ಆಳ ಸಮುದ್ರದಿಂದ ಮೇಲ್ಭಾಗದಲ್ಲಿ ತೇಲುತ್ತಾ ಸೂರ್ಯನ ಕಿರಣಗಳನ್ನು ಹೀರುತ್ತವೆ. ಜಲ್ಲಿ ಫಿಷ್‌, ಚಿಕ್ಕ ಮೀನುಗಳು ಇವುಗಳ ಆಹಾರವಾಗಿದೆ.

ಔಷಧೀಯ ಗುಣ ಸಹ ಇದರ ಮಾಂಸಕ್ಕೆ ಇದ್ದು ಹೊರ ದೇಶದಲ್ಲಿ ಇವುಗಳ ಭಕ್ಷಣೆ ಮಾಡುತ್ತಾರೆ. ಅತೀ ಹೆಚ್ಚು ಮೂಳೆಗಳು ಇರುವುದರಿಂದ ಇದರ ತೂಕವೂ ಟನ್‌ಗಟ್ಟಲೇ ಇರುತ್ತದೆ.

vtv vitla
- Advertisement -

Related news

error: Content is protected !!