Friday, April 26, 2024
spot_imgspot_img
spot_imgspot_img

ಸಚಿವೆಯಾಗುತ್ತಿದಂತೆ ಟ್ವಿಟ್ಟರ್ ಹಿಸ್ಟರಿ ಡಿಲೀಟ್ ಮಾಡಿದ ಶೋಭಾ ಕರಂದ್ಲಾಜೆ!

- Advertisement -G L Acharya panikkar
- Advertisement -

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ನೂತನ ಸಚಿವರಾಗಿ ಆಯ್ಕೆಯಾಗುತ್ತಿದ್ದಂತೆಯೇ ತಮ್ಮ ಟ್ವಿಟ್ಟರ್ ಖಾತೆಯ ಹಿಸ್ಟರಿ ಡಿಲೀಟ್ ಮಾಡಿದ್ದಾರೆ.

ಶೋಭಾ ಕರಂದ್ಲಾಜೆಯವರು 11 ವರ್ಷಗಳಿಂದ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದು, ಅವರ ಟ್ವಿಟ್ಟರ್ ನಲ್ಲಿ ಇದೀಗ ಕೇವಲ 2 ಟ್ವೀಟ್ ಗಳು ಮಾತ್ರವೇ ಕಂಡು ಬರುತ್ತಿದೆ. ಪಕ್ಷದ ಬೆನ್ನಿಗೆ ನಿಲ್ಲುತ್ತಿದ್ದ ಶೋಭಾ ಕರಂದ್ಲಾಜೆ ಅವರು ತಮ್ಮ ಖಾತೆಯಲ್ಲಿ ಹಲವಾರು ಟ್ವೀಟ್ ಗಳನ್ನು ಮಾಡಿದ್ದು, ಕೆಲವು ಟ್ವೀಟ್ ಗಳು ಕೋಮು ಸೌಹಾರ್ದದ ವಿರುದ್ಧವಾಗಿದ್ದವು ಎನ್ನುವ ಟೀಕೆಗಳಿಗೂ ಗುರಿಯಾಗಿತ್ತು. ಸಚಿವರಾಗುತ್ತಿದ್ದಂತೆಯೇ ಈ ಟ್ವೀಟ್ ಗಳಿಂದ ಸಮಸ್ಯೆಗಳಾಗಬಹುದು ಎನ್ನುವ ಕಾರಣಕ್ಕೆ ಟ್ವಿಟ್ಟರ್ ಹಿಸ್ಟರಿ ಡಿಲೀಟ್ ಮಾಡಿರಬಹುದು ಎನ್ನುವ ಮಾತುಗಳು ಸದ್ಯ ಕೇಳಿ ಕೇಳಿಬರುತ್ತಿವೆ.

2.79 ಲಕ್ಷಕ್ಕೂ ಅಧಿಕ ಅನುಯಾಯಿಗಳು ಶೋಭಾ ಕರಂದ್ಲಾಜೆ ಅವರ ಟ್ವಿಟ್ಟರ್ ನಲ್ಲಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರ ಹಳೆಯ ಟ್ವೀಟ್ ಗಳು ವೈರಲ್ ಆಗಿ ಅವರು ಸಂಕಷ್ಟಕ್ಕೀಡಾಗಿದ್ದು, ಹೀಗೆ ಹಳೆಯ ಟ್ವೀಟ್ ಗಳಿಂದಾಗಿ ಸದ್ಯ ಬಹಳಷ್ಟು ಗಣ್ಯರು ತಮ್ಮ ಸ್ಥಾನವನ್ನು ಕೂಡ ಕಳೆದುಕೊಂಡಿದ್ದಾರೆ. ಹೀಗಾಗಿ ಸಚಿವ ಸ್ಥಾನ ದೊರಕಿದ ಬೆನ್ನಲ್ಲೇ ವಿವಾದಗಳು ಬೇಡ ಎನ್ನುವ ಕಾರಣಕ್ಕಾಗಿ ಹಳೆಯ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ, ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ.

driving
- Advertisement -

Related news

error: Content is protected !!