Saturday, May 11, 2024
spot_imgspot_img
spot_imgspot_img

ಪುತ್ತೂರಿನ ಮಣ್ಣಿನಲ್ಲಿ ಮೊಳಗಿದೆ ಕೇಸರಿ ಘರ್ಜನೆ: ಬೃಹತ್ ಹಿಂದೂ ಐಕ್ಯತಾ ಸಮಾವೇಶದಲ್ಲಿ ಗಣ್ಯಾತಿಗಣ್ಯರು ಭಾಗಿ

- Advertisement -G L Acharya panikkar
- Advertisement -

ಪುತ್ತೂರು: ಸಮಾಜವನ್ನು ಕಾಯುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಈ ನಿಟ್ಟಿನಲ್ಲಿ ಹಿಂದು ಅನ್ನುವುದು ಕೇವಲ ಘೋಷಣೆ ಅಲ್ಲ. ಹಿಂದು ಅನ್ನುವುದು ಆಚರಣೆ ಆಗಬೇಕು. ಅದಕ್ಕೆ ಹಿಂದು ಸಮಾಜ ಬದ್ಧವಾಗಬೇಕು ಎಂದು ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು.

ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಮಾ.21ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆದ ಬೃಹತ್ ಹಿಂದೂ ಐಕ್ಯತಾ ಸಮಾವೇಶದ ಧರ್ಮಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಕಲಿಯುಗದಲ್ಲಿ ಭಗವಂತನ ಅವತಾರ ಇಲ್ಲ ಎಂದು ಸಾಕ್ಷಾತ್ ಭಗವಂತನೇ ಸಾರಿ ಹೇಳಿದಾಗ ಸಂಘಟಿತ ಶಕ್ತಿಯೇ ಧರ್ಮವನ್ನು ರಕ್ಷಿಸಬೇಕು.ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಬಲ ಜಾತಿಗಳನ್ನೇ ಶಕ್ತಿಗಳನ್ನಾಗಿ ಎತ್ತಿ ಕಟ್ಟುವ ಕುತಂತ್ರ ಇವತ್ತು ತಿಳಿದಿದೆ. ಜಾತಿ ಅಭಿಮಾನ ತಪ್ಪಲ್ಲ. ಆದರೆ ದುರಭಿಮಾನ ತಪ್ಪು, ನಮ್ಮ ನಮ್ಮಲ್ಲಿ ಸಾಮರಸ್ಯ, ಸಮನ್ವಯ, ಇದನ್ನು ಸಾಧಿಸುವುದು ನಮ್ಮ ನಿತ್ಯದ ವ್ಯವಹಾರದ ಭಾಗವಾಗಬೇಕು.ನಾವೆಲ್ಲ ಹಿಂದು ನಾವೆಲ್ಲ ಒಂದು ಎಂಬ ಘೋಷಣೆ ಆಗಬಾರದು. ಅದು ಆಚರಣೆ ಆಗಬೇಕು. ದೋಷಗಳನ್ನು ಕಿತ್ತು ಎಸೆಯಬೇಕು ಎಂದ ಅವರು ಡಿಜೆ ಹಳ್ಳಿ, ಕೆಜೆ ಹಳ್ಳಿ, ಮಂಗಳೂರು ಸಿಎಎ ಪ್ರತಿಭಟನೆ, ಪಾದರಾಯನಪುರ, ಸಾದಿಕ್‍ಪಾಲ್ಯ, ಬೂಪಸಂದ್ರದ ಗಲಭೆಗಳು ನಿನ್ನೆಯ ತನಕ ಮಾತ್ರ ಆಗಿತ್ತು. ನಾಳೆಗೆ ಅಲ್ಲ. ಅಕಸ್ಮಾತ್ ತಮ್ಮ ಬೇಡಿಕೆ ಇಟ್ಟು ಯುದ್ದವನ್ನು ಸಮಾಜದ ವಿರುದ್ಧ ಸಾರಿದ್ದೇ ಆದರೆ ಅದು ಪುತ್ತೂರಿನಲ್ಲಿ ಅಥವಾ ಇತರ ಕಡೆಯಲ್ಲೂ ಆಗಬಹುದು. ಆದರೆ ಅದುವೇ ಫಸ್ಟ್ ಮತ್ತು ಲಾಸ್ಟ್ ಆಗಬೇಕು ಎಂದು ಜಗದೀಶ್ ಕಾರಂತ್ ಹೇಳಿದರು.

ಹಿಂದೂ ಭಾವನೆಗಳನ್ನು ಕೆಣಕಿದರೆ ನೀನ್ ತಾಂಟ್ರೆ ಬಾ ತಾಂಟ್ ಸವಾಲು: ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೂ ಸಮಾಜದ ವಿರುದ್ಧ ಮಾತನಾಡುವವರು ವೇದಿಕೆಯಲ್ಲಿ ಬೊಗಳಿದ್ರೆ ಸಾಲದು ಅದನ್ನು ಅನುಷ್ಠಾನಕ್ಕೆ ತರುವ ತಾಕತ್ತುಬೇಕು. ಇವತ್ತು ಎಲ್ಲವನ್ನು ಹಿಂದೂ ಸಮಾಜ ಸಹಿಸಿದೆ.ಮುಂದೆ ನಮ್ಮ ಭಾವನೆಗಳನ್ನು ಕೆಣಕಿದರೆ, ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದರೆ ನಿಮಗೆ ಮಾತ್ರ ಗೊತ್ತಿರುವುದಲ್ಲ. ನಮಗೂ ಗೊತ್ತಿದೆ. ನೀನ್ ತಾಂಟ್ರೆ ಬಾ ತಾಂಟ್ ಎಂದು ಸವಾಲು ಹಾಕಿದರು.

ಕುಹಕ ದಾರಿಗಳಿಂದ ಹಿಂದೂ ಹೆಣ್ಣು ಮಕ್ಕಳನ್ನು ಪೆÇನ್ನಾನಿಗೆ ಕರೆದುಕೊಂಡು ಹೋಗಿ ಮತಾಂತರ ಕೇಂದ್ರದಲ್ಲಿ ಇರಿಸಿ ಅಲ್ಲಿ ಮತಾಂತರಗೊಳಿಸುವಿಕೆಗೆ ಪ್ರಯತ್ನಿಸುವಾಗ ಅಲ್ಲಿಂದಲೇ ವಾಪಾಸು ಕರೆದುಕೊಂಡು ಬಂದಂತಹ ಗಂಡು ಮಕ್ಕಳಿಗೆ ಪುತ್ತೂರಿನ ಮಣ್ಣಿನಲ್ಲಿ ಗಟ್ಟಿಯಾಗಿ ಮಾತನಾಡಲು ದಮ್ಮಿದೆ ಎಂದು ಸಾರಿ ಸಾರಿ ಹೇಳುತ್ತೇನೆ ಎಂದು, ಸಮಾವೇಶದ ಲೈವ್ ಕಾರ್ಯಕ್ರಮದಲ್ಲಿ ಬಂದ ಸವಾಲಿನ ಸಂದೇಶಕ್ಕೆ ಅವರು ಎದುರುತ್ತರ ನೀಡಿದರು.

ರಾಮ ಮಂದಿರ ಉಳಿಯಲು ರಾಮ ರಾಜ್ಯದ ಕನಸು ನನಸಾಗಬೇಕು: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ ರಾಮ ಮಂದಿರ ನಿರ್ಮಾಣ ಮಾಡೋದು ಒಂದು ಕಾಲದಲ್ಲಿ ಬಹಳ ದೊಡ್ಡ ಕೆಲಸ ಆಗಿತ್ತು.ಆದರೆ ಇವತ್ತು ರಾಮ ಭಕ್ತರು ರಾಮಮಂದಿರ ನಿರ್ಮಾಣ ದೊಡ್ಡ ಕೆಲಸ ಅಲ್ಲ ಎಂದು ತೀರ್ಮಾನ ಮಾಡಿದ್ದಾರೆ.ಆ ಮಂದಿರ ಮಂದಿರವಾಗಿಯೇ ಉಳಿಯಬೇಕಾದರೆ ರಾಮ ರಾಜ್ಯದ ಕನಸು ನನಸಾಗಬೇಕು. ರಾವಣನ ರಾಜ್ಯದಲ್ಲಿ ರಾಮ ಮಂದಿರ ಸಾಧ್ಯವಿಲ್ಲ. ಒಗ್ಗಟ್ಟನ್ನು ಉಳಿಸಬೇಕು. ಇವತ್ತಿಗೂ ಸಮಾಜದಲ್ಲಿ ಬಂಗಾರದ ಜಿಂಕೆಯಾಗಿ ರಾಮನ ಧ್ವನಿ ಕೂಗುವವರಿದ್ದಾರೆ ಇದರಿಂದ ಎಚ್ಚರಿಕೆಯಿಂದ ಇದ್ದು ಇವತ್ತಿಗೂ ನಾವು ಮೋಸಕ್ಕೆ ಒಳಗಾಗಬಾರದು ಎಂದರು.

ತುರ್ತು ಚಿಕಿತ್ಸೆಗಾಗಿ ಅಗತ್ಯ ಇರುವವರಿಗೆ ಆಂಬುಲೆನ್ಸ್ ಸೇವೆಯನ್ನು ಹಿಂದು ಜಾಗರಣ ವೇದಿಕೆ ವತಿಯಿಂದ ನೀಡಲಾಗುತ್ತಿದ್ದು, ಅದನ್ನು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನೆ ಕಾರ್ಯದರ್ಶಿ ಜಗದೀಶ್ ಕಾರಂತ್ ಮತ್ತು ಸಾಧು ಸಂತರು ತೆಂಗಿನ ಕಾಯಿ ಒಡೆದು ಲೋಕಾರ್ಪಣೆಗೊಳಿಸಿದರು. ಲೋಕಾರ್ಪಣೆಗೊಂಡ ಆಂಬುಲೆನ್ಸ್ ಹಿಂಜಾವೇ ಈಶ್ವರಮಂಗಲ ಘಟಕದ ನಿರ್ವಹಣೆಯಲ್ಲಿ ಈಶ್ವರಮಂಗಲದಲ್ಲಿ ಸೇವೆಗೆ ಲಭ್ಯವಾಗಲಿದೆ. ಕೊಳ್ತಿಗೆ, ಸುಳ್ಯಪದವು, ಈಶ್ವರಮಂಗಲ, ಪಡುಮಲೆ, ಕೌಡಿಚ್ಚಾರು, ಕಾವು ಭಾಗಗಳಲ್ಲಿ ಈ ನೂತನ ಆಂಬುಲೆನ್ಸ್ ಸೇವೆ ದೊರಕಲಿದೆ. ಆಂಬುಲೆನ್ಸ್ ಸೇವೆ ತೀರಾ ಅಶಕ್ತರಿಗೆ ಉಚಿತವಾಗಿದ್ದು, ಉಳಿದವರಿಗೆ ಮಿತದರದಲ್ಲಿ ಸೇವೆ ನೀಡಲಿದೆ. ಹಿಂದು ಜಾಗರಣ ವೇದಿಕೆ ರಕ್ತ ಸಹಾಯವಾಣಿಯಿಂದ ಹಲವು ಸೇವೆ ನೀಡಿದೆ. ಕೊರೋನಾ ಸಂದರ್ಭದಲ್ಲೂ ಅಗತ್ಯ ವಸ್ತುಗಳ ಪೂರೈಕೆ, ಶವ ಸಂಸ್ಕಾರವನ್ನು ನಡೆಸಿದೆ ಎಂದು ಉದ್ಘೋಷಕರು ತಿಳಿಸಿದರು.

- Advertisement -

Related news

error: Content is protected !!