Saturday, April 27, 2024
spot_imgspot_img
spot_imgspot_img

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ದೈವ ದೇವರುಗಳನ್ನು ಅಶ್ಲೀಲವಾಗಿ ಚಿತ್ರಿಸಿ ಅವಹೇಳನ; ಸೂಕ್ತ ಕ್ರಮ ಕೈಗೊಳ್ಳುವಂತೆ ವಿಹಿಂಪ ಆಗ್ರಹ

- Advertisement -G L Acharya panikkar
- Advertisement -

ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಆರಾಧನೆಯ ದೈವ ದೇವರುಗಳ ಬಗ್ಗೆ ಅಶ್ಲೀಲವಾಗಿ ಚಿತ್ರಿಸಿದ್ದನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಘಟಕ ಖಂಡಿಸಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿಯನ್ನು ಮಾಡಿದ್ದಾರೆ.

ದೈವ-ದೇವರುಗಳ ಬಗ್ಗೆ ಅಶ್ಲೀಲವಾಗಿ ಚಿತ್ರಿಸಿದ್ದು
ಹಿಂದೂಗಳ ಮನಸ್ಸಿಗೆ ಘಾಸಿ ಉಂಟಾಗಿದೆ. ವಾಟ್ಸಪ್ ನಲ್ಲಿ ದೈವ-ದೇವರುಗಳ ಫೋಟೋಗಳನ್ನು ಅಶ್ಲೀಲ ಫೋಟೋಗಳೊಂದಿಗೆ ಜೋಡಣೆ ಮಾಡಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಇದು ಕೋಮು ಸೌಹಾರ್ದತೆಗೆ ದಕ್ಕೆ ತರುವಂತದ್ದಾಗಿದ್ದು ಈ ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಹಾಗೂ ಇನ್ನು ಮುಂದಕ್ಕೆ ಇಂತಹ ಅಶ್ಲೀಲ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಮರುಕಳಿಸದಂತೆ ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸುವ ವೇಳೆ ಬಜರಂಗದಳ ಜಿಲ್ಲಾ ಸಹ ಸಂಚಾಲಕರು ಗುರುರಾಜ್ ಬಂಟ್ವಾಳ, ವಿ. ಹಿಂ. ಪ ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಬಜರಂಗದಳ ಬಂಟ್ವಾಳ ಪ್ರಖಂಡ ಸಂಚಾಲಕರು ಶಿವಪ್ರಸಾದ್ ತುಂಬೆ, ಬಜರಂಗದಳ ಬಂಟ್ವಾಳ ಪ್ರಖಂಡ ಪ್ರಮುಖರಾದ ಪ್ರಸಾದ್ ಶಿವಾಜಿನಗರ, ರತೀಶ್ ರಾಮಲಕಟ್ಟೆ, ಕಿರಣ್ ಪೊಡಿಕಲ, ವಿನೀತ್ ತುಂಬೆ, ಹಾಗೂ ಬಜರಂಗದಳ ಬಂಟ್ವಾಳ ನಗರ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!