Saturday, June 6, 2026
spot_imgspot_img
spot_imgspot_img

ಹುಡುಗಿ ಹುಡುಕಿ ಸುಸ್ತಾದ ಯುವಕ; ’ಕನ್ಯಾ ಭಾಗ್ಯ’ ಕಲ್ಪಿಸುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಮೊರೆಹೋದ ಯುವಕ

- Advertisement -
- Advertisement -

ಕನ್ಯೆ ಹುಡುಕಿ ಸುಸ್ತಾದ ಯುವಕನೊಬ್ಬ ಗ್ರಾಮ ಪಂಚಾಯತಿ ಮೊರೆಹೋಗಿದ್ದಾನೆ. ಗ್ರಾ.ಪಂ. ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ’ಕನ್ಯೆ ಭಾಗ್ಯ’ ಜಾರಿಗೆ ಒತ್ತಾಯ ಮಾಡಿದ್ದಾನೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿಯಲ್ಲಿ ಈ ಪ್ರಸಂಗ ನಡೆದಿದೆ. ತನಗೊಂದು ಕನ್ಯೆಯನ್ನು ಹುಡುಕಿಕೊಡಿ ಎಂದು ಗ್ರಾಮ ಪಂಚಾಯತ್​​ ಪಿಡಿಒಗೆ ಮುತ್ತು ಹೂಗಾರ (28) ಎಂಬ ಯುವಕ ಮನವಿ ಮಾಡಿದ್ದಾನೆ.

28 ವರ್ಷದ ಮುತ್ತು ಹೂಗಾರ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 50 ಸಾವಿರ ರೂಪಾಯಿ ಆದಾಯವಿದೆ. ಆದರೂ ಹುಡುಗಿ ಸಿಗ್ತಾ ಇಲ್ಲ ಎಂಬುದು ಆತನ ಅಳಲಾಗಿದೆ. ನನಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇಲ್ಲ. ಕನ್ಯೆ ತೋರಿಸ್ತಾರೆ, ಬಳಿಕ ಸರ್ಕಾರಿ ನೌಕರಿ ಇದ್ದವ್ರಿಗೆ ಕೊಡ್ತೀವಿ ಅಂತಾ ಸಬೂಬು ಹೇಳ್ತಾ ಇದಾರೆ ಅಂತಾ ಯುವಕ ತನ್ನ ಗೋಳಾಟ ತೋಡಿಕೊಂಡಿದ್ದಾನೆ.

ಸುತ್ತಮುತ್ತ ಹಳ್ಳಿ ಹಳ್ಳಿ ಅಡ್ಯಾಡಿ ಕನ್ಯೆ ನೋಡಿದ್ದೇನೆ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ. ಹೀಗಾಗಿ ತನಗೊಂದು ಜೀವನದ ಸಂಗಾತಿಯನ್ನ ಹುಡುಕುವಂತೆ, ಯಾವುದೇ ಜಾತಿಯ ಕನ್ಯೆ ಇದ್ದರೂ ಪರವಾಗಿಲ್ಲ ಎಂದು ಗ್ರಾಮ ಪಂಚಾಯತ್​​ಗೆ ಮನವಿ ಕೊಟ್ಟಿದ್ದಾರೆ ಮುತ್ತು ಹೂಗಾರ.

- Advertisement -

Related news

error: Content is protected !!