Thursday, June 25, 2026
spot_imgspot_img
spot_imgspot_img

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮೇಲೆ ಬಜರಂಗದ ದಳದ ಕಾರ್ಯಕರ್ತರಿಂದ ಹಲ್ಲೆ

- Advertisement -
- Advertisement -

ಕಾರ್ಕಳ: ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೊಬ್ಬರ ಮೇಲೆ ಬಜರಂಗಳ ದಳ ಕಾರ್ಯಕರ್ತರೆನ್ನಲಾದ ತಂಡವೊಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಟ್ಟೆ ಪರಪ್ಪಾಡಿ ನಿವಾಸಿ ಅನಿಲ್ ಪೂಜಾರಿ(29) ಹಲ್ಲೆಗೊಳಗಾದವರು. ಮಾ.14ರಂದು ರಾತ್ರಿ 10:30ರ ಸುಮಾರಿಗೆ ಪರಪ್ಪಾಡಿ ಎಂಬಲ್ಲಿ ಆರೋಪಿಗಳಾದ ಬಜರಂಗದಳ ಕಾರ್ಯಕರ್ತರೆನ್ನಲಾದ ಸುನೀಲ್, ಸುಧೀರ್, ಪ್ರಸಾದ್, ಶರತ್, ಜಗದೀಶ್ ಪೂಜಾರಿ ಎಂಬವರು ಅನಿಲ್ ಮೇಲೆ ತಲವಾರು ದಾಳಿ ನಡೆಸಿದ್ದಾರೆಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

ಪರಪ್ಪಾಡಿ ಶಾಲೆಯ ಬಳಿಯ ಸರಕಾರಿ ರಸ್ತೆಯ ವಿಚಾರದಲ್ಲಿ ಇವರ ಮಧ್ಯೆ ತಕರಾರಿದ್ದು, ಇದೇ ಕಾರಣಕ್ಕೆ ಈ ಹಿಂದೆಯೂ ಇವರ ನಡುವೆ ಸಣ್ಣಪುಟ್ಟ ಜಗಳ ನಡೆದಿತ್ತೆನ್ನಲಾಗಿದೆ. ಇದೇ ದ್ವೇಷದಿಂದ ರವಿವಾರ ರಾತ್ರಿ ಕಾರಿನಲ್ಲಿ ಬಂದ ಆರೋಪಿಗಳು ಮಾರಕಾಯುಧಗಳಾದ ತಲವಾರು ಹಾಗೂ ಮರದ ಸೋಂಟೆಯೊಂದಿಗೆ ಅನಿಲ್ ಪೂಜಾರಿಯವರ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆನ್ನಲಾಗಿದೆ.

ಬಳಿಕ ಮನೆಯೊಳಗೆ ನುಗ್ಗಿದ ಆರೋಪಿಗಳು, ತಡೆಯಲು ಬಂದ ಅನಿಲ್ ತಾಯಿ ಸುಗುಣಾರನ್ನು ತಳ್ಳಿ ಹಾಕಿ ಕಾಲಿನಿಂದ ತುಳಿದಿದ್ದರೆಂದು ದೂರಲಾಗಿದೆ. ಈ ವೇಳೆ ಸುಧೀರ್ ಮತ್ತು ಸುನೀಲ್ ಕೊಲ್ಲುವ ಉದ್ದೇಶದಿಂದ ತಲವಾರಿನಿಂದ ಅನಿಲ್ ತಲೆಗೆ ದಾಳಿ ಮಾಡಿದ್ದರೆ, ಉಳಿದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಅನಿಲ್ ಹಾಗೂ ಅವರ ತಾಯಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!