Monday, June 15, 2026
spot_imgspot_img
spot_imgspot_img

ಅರ್ಚಕರಿಗೆ ಜೀವ ಬೆದರಿಕೆ ಪತ್ರದ ಹಿನ್ನೆಲೆ-ಹಿಜಾವೇ ಮತ್ತು ಸಂಘ ಪರಿವಾರದ ಪ್ರಮುಖರ ಭೇಟಿ

- Advertisement -
- Advertisement -

ಅನಂತಾಡಿ ಉಳ್ಳಾಲ್ತಿ ದೈವಸ್ಥಾನದ ಪ್ರದಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ರವರಿಗೆ ಇತ್ತೀಚಿಗೆ ಮುಸ್ಲಿಂ ಮೂಲಭೂತವಾದಿಗಳ ಹೆಸರಿನಲ್ಲಿ ಜೀವ ಬೆದರಿಕೆ ಪತ್ರ ಬಂದಿದ್ದು ಅವರ ಮನೆಗೆ ಹಿಂದೂ ಜಾಗರಣ ವೇದಿಕೆ ಮತ್ತು ಸಂಘ ಪರಿವಾರದ ಪ್ರಮುಖರು ಭೇಟಿ ನೀಡಿದರು.

“ನಿಮ್ಮ ಮತ್ತು ಮನೆಯವರ ಜೊತೆ ನಾವಿದ್ದೇವೆ ಮತ್ತು ರಕ್ಷಣೆ ಕೊಡುವುದು ಹಿಂದೂ ಸಮಾಜದ ಕರ್ತವ್ಯ” ಎಂದು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯಿತು. ತಕ್ಷಣ ಪೊಲೀಸ್ ಠಾಣೆ ಗೆ ಭೇಟಿ ನೀಡಿ ಪ್ರಕರಣ ತನಿಖೆ ತೀವ್ರ ಗೊಳಿಸುವಂತೆ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ,ಹಿಂದು ಜಾಗರಣ ವೇದಿಕೆ . ಸಚಿನ್ ಪಾಪೇಮಜಲು.ರತ್ನಕರ ಶೆಟ್ಟಿ. . ಪ್ರಮುಖರಾದ ನವೀನ್ ರೈ. ರೂಪೇಶ್ ನಾಯ್ಕ್. ಜಯರಾಮ ಆಚಾರ್ಯ. ಗಣೇಶ್ ಪೂಜಾರಿ. ಉಮೇಶ್ ಪೂಜಾರಿ. ಚಂದ್ರಶೇಖರ. ಕೇಶವ ಪೂಜಾರಿ. ಸಂತೋಷ್. ರಮೇಶ ಗೌಡ. ಉಪಸ್ಥಿತರಿದ್ದರು.

ಹಿಂದು ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ,ಜಿಲ್ಲಾ ಅಧ್ಯಕ ಜಗದೀಶ್ ನೆತ್ರಕೆರೆ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ ಉಪಸ್ಥಿತರಿದ್ದರು.

- Advertisement -

Related news

error: Content is protected !!