Sunday, June 21, 2026
spot_imgspot_img
spot_imgspot_img

ಕಲ್ಲಡ್ಕ : (ಆ.11) ಹಿಂದೂ ಜಾಗರಣ ವೇದಿಕೆ ಕಲ್ಲಡ್ಕ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ

- Advertisement -
- Advertisement -

ಕಲ್ಲಡ್ಕ : ಹಿಂದೂ ಜಾಗರಣ ವೇದಿಕೆ ಕಲ್ಲಡ್ಕದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ 11-08-2024 ಆದಿತ್ಯವಾರದಂದು ಮಧ್ಯಾಹ್ನ 2.30 ರಿಂದ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ, ಮೆಲ್ಕಾರ್‌ ರಾಮದೇವ ಸಭಾಭವನ ಮತ್ತು ವೀರಕಂಭ ಶಾರದಾ ಭಜನಾ ಮಂದಿರ ಬಳಿಯಿಂದ ಏಕಕಾಲಕ್ಕೆ ವಾಹನ ಜಾಥಾ ಹೊರಡಲಿದೆ.

ಸಂಜೆ ಸಮಯ 4ಕ್ಕೆ ಸರಿಯಾಗಿ ಉಮಾಶಿವ ದೇವಸ್ಥಾನ ಕಲ್ಲಡ್ಕ ದಲ್ಲಿ ನಡೆಯುವ ಸಭಾ ಕಾರ್ಯಕ್ರಮವು ಯಶವಂತ ಮುಲ್ಕಿ ಮಾನ್ಯ ಸಂಘ ಚಾಲಕರು, ಮಂಗಳೂರು ಗ್ರಾಮಾಂತರ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ಜರಗಳಿದೆ. ಜಯಕುಮಾರ್‌ ಕೆದಿಲ ನಿವೃತ ಯೋಧರು ಎ.ಸಿ.ಪಿ ಹವಲ್ದಾರ್‌ ಭಾರತೀಯ ಭೂಸೇನೆ ಇವರ ಗೌರವ ಉಪಸ್ಥಿತಿಯೊಂದಿಗೆ, ಪ್ರಜ್ಞಾ ಕಶ್ಯಪ್‌ ಪ್ರಾಂತ ಕಾರ್ಯಕಾರಿಣಿ ಸದಸ್ಯರು, ಹಿ.ಜಾ.ವೇ. ಇವರ ದಿಕ್ಸೂಚಿ ಭಾಷಣದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂ ಬಾಂಧವರು ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!