Monday, June 15, 2026
spot_imgspot_img
spot_imgspot_img

**ಎಬಿವಿಪಿ ಮುಖಂಡನಿಗೆ ವಿದೇಶದಿಂದ ಕೊಲೆ ಬೆದರಿಕೆ ಕರೆ !

- Advertisement -
- Advertisement -

ಪುತ್ತೂರು: ಹಿಂದೂ ಸಂಘಟನೆಯ ಇಬ್ಬರು ಮುಖಂಡರಿಗೆ ವಿದೇಶದಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಒಡ್ಡಿದ ಘಟನೆ ಸಂಭವಿಸಿದೆ.

ಪುತ್ತೂರು ವಿವೇಕಾನಂದ ಕಾಲೇಜಿನ ಎಬಿವಿಪಿಯ ನಿಕಟಪೂರ್ವ ಅಧ್ಯಕ್ಷ ಹೃತೇಶ್ ಬಿ.ಕೆ ಹಾಗೂ ಹಿಂದೂ ಸಂಘಟನೆ ಮುಖಂಡ ಅಕ್ಷಯ್ ರಜಪೂತ್ ಕಲ್ಲಡ್ಕ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಹೃತೇಶ್ ಅವರು ಚಿಕ್ಕಪ್ಪನ ಮೊಬೈಲ್ ಬಳಸುತ್ತಿದ್ದು, ಈ ಮೊಬೈಲ್ ಗೆ +85926368 ಸಂಖ್ಯೆಯಿಂದ ಅಪರಿಚಿತ ವ್ಯಕ್ತಿ ಹೆಸರು ಅಥವಾ ವಿಳಾಸವನ್ನು ತಿಳಿಸದೇ ಮಲಯಾಳಂ ಭಾಷೆಯಲ್ಲಿ ನಿನ್ನನು ಹಾಗೂ ಅಕ್ಷಯ್ ರಜಪೂತ್ ನ ಮನೆಗೆ ನುಗ್ಗಿ ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದು, ಅಲ್ಲದೇ ಅವಾಚ್ಯ ಶಬ್ದಗಳಿಂದ ಹೃತೇಶ್ ಅವರ ಕುಟುಂಬವನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಇಬ್ಬರು ಯುವಕರು ಹಿಂದೂ ಸಂಘಟನೆಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸುತ್ತಿದ್ದಾರೆ.
ಈ ಬಗ್ಗೆ ಹೃತೇಶ್ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ‌.

- Advertisement -

Related news

error: Content is protected !!