Sunday, June 21, 2026
spot_imgspot_img
spot_imgspot_img

ಹಿರಿಯಡ್ಕ: ತಂತಿಬೇಲಿಯಲ್ಲಿ ಸಿಲುಕಿದ್ದ ಚಿರತೆ ರಕ್ಷಣೆ..!

- Advertisement -
- Advertisement -

ಹಿರಿಯಡ್ಕ: ತಂತಿ ಬೇಲಿಯಲ್ಲಿ ಸಿಲುಕಿಕೊಂಡಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿರುವ ಘಟನೆ ಕುಕ್ಕೆಹಳ್ಳಿ- ಹಿರಿಯಡ್ಕ ರಸ್ತೆಯ ಬಕ್ಕಾರೆ ಎಂಬಲ್ಲಿ ನಡೆದಿದೆ.

ಸರಕಾರಿ ಜಾಗದಲ್ಲಿ ಅಳವಡಿಸಲಾಗಿದ್ದ ತಂತಿ ಬೇಲಿಯಲ್ಲಿ ಸುಮಾರು 4-5 ವರ್ಷ ಪ್ರಾಯದ ಗಂಡು ಚಿರತೆಯೊಂದು ಬೆಳಗ್ಗಿನ ವೇಳೆ ಸಿಲುಕಿಕೊಂಡಿತ್ತು. ತಂತಿಯು ಚಿರತೆಯ ಸೊಂಟದ ಭಾಗಕ್ಕೆ ಉರುಳು ಬಿದ್ದಿರುವುದರಿಂದ ಚಿರತೆ ನರಳಾಡುತ್ತಿತ್ತು. ಮಧ್ಯಾಹ್ನ ವೇಳೆ ಚಿರತೆಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬೋನಿನೊಂದಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಮಂಗಳೂರಿನ ಅರವಳಿಕೆ ತಜ್ಞರಿಗೆ ಮಾಹಿತಿ ನೀಡಿದರು.

ಸಂಜೆ 5.30ರ ಸುಮಾರಿಗೆ ಆಗಮಿಸಿದ ಅರವಳಿಕೆ ತಜ್ಞರಾದ ಯಶಸ್ವಿ ನಾರಾವಿ ಹಾಗೂ ಅಕ್ಷಯ್ ಶೇಟ್ ಉರುಳಿನಲ್ಲಿ ಸಿಲುಕಿದ ಚಿರತೆಗೆ ಶೂಟ್ ಮಾಡಿ ಅರವಳಿಕೆ ಔಷಧ ನೀಡಿದರು. ಇದರಿಂದ ಪ್ರಜ್ಞೆ ತಪ್ಪಿದ ಚಿರತೆಯನ್ನು ಬೋನಿನೊಳಗೆ ಹಾಕಿ, ನಿಗಾದಲ್ಲಿ ಇರಿಸಲಾಯಿತು. ಬಳಿಕ ಚಿಕಿತ್ಸೆ ನೀಡಿ ಅದನ್ನು ಸುರಕ್ಷಿತ ಅರಣ್ಯವಾಗಿ ಅರಣ್ಯಕ್ಕೆ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ಧೇಶ್ವರ ಕುಂಬಾರ, ಉಪವಲಯ ಅರಣ್ಯಾಧಿಕಾರಿಗಳಾದ ಪ್ರಮೋದ್, ನವೀನ್ ಡಿ.ಎನ್., ಗಸ್ತು ಅರಣ್ಯ ಪಾಲಕರಾದ ಅರುಣ್, ಶ್ರೀಕಾಂತ್, ಪ್ರವೀಣ್, ಅರಣ್ಯ ವೀಕ್ಷಕರಾದ ಸಂಕ, ಸುಧರ್ಶನ್, ಪೊಲೀಸ್ ಹಿರಿಯಡ್ಕ ಎಸ್ಸೈ ಮಂಜುನಾಥ್ ಪಾಲ್ಗೊಂಡಿದ್ದರು.

- Advertisement -

Related news

error: Content is protected !!