Tuesday, June 23, 2026
spot_imgspot_img
spot_imgspot_img

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಪ್ರಕರಣ- ನಾಲ್ವರ ಬಂಧನ

- Advertisement -
- Advertisement -

ಮಂಗಳೂರು: ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ಸಮೀಪದ ಮನೆಯೊಂದಕ್ಕೆ ನುಗ್ಗಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು, 22.860 ಗ್ರಾಂ ಚಿನ್ನಾಭರಣ ಹಾಗೂ ₹11 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಕೇರಳದ ಕಾಸರಗೋಡಿನ ಇಬ್ರಾಹಿಂ ಕಲಂದರ್ (38), ಮೊಹಮ್ಮದ್ ಹನೀಫ್ (48), ಶಿವಮೊಗ್ಗದ ಮೊಹಮ್ಮದ್ ಮುದಸ್ಸಿರ್ (20), ಮೂಡುಬಿದಿರೆಯ ಶಾಹೀಂ ಸಿದ್ದೀಕ್ (26) ಬಂಧಿತರು.

ನ. 11ರಂದು ಮೂಡುಬಿದಿರೆ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಹಂಡೇಲು ಹತ್ತಿರದ ಸಾರಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಹಿಂಬದಿ ಬಾಗಿಲು ಮುರಿದು ಆರೋಪಿಗಳು ಚಿನ್ನಾಭರಣ ದೋಚಿದ್ದರು. ಈ ಕುರಿತು ಸಾರಮ್ಮ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

- Advertisement -

Related news

error: Content is protected !!