




ವಿಟ್ಲ: ಕರ್ನಾಟಕ ಸರ್ಕಾರ, ದ.ಕ. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಂಟ್ವಾಳ ಹಾಗೂ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿಟ್ಲ (RMSA) ಸಹಯೋಗದಲ್ಲಿ ಬಂಟ್ವಾಳ ತಾಲೂಕು ಮಟ್ಟದ 14 ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟವು ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ (RMSA) ವಿಟ್ಲದಲ್ಲಿ ನಡೆಯಿತು.

ವಿಟ್ಲ ಜಿಎಸ್ಬಿ ಸಮಾಜದ ಅಧ್ಯಕ್ಷ ಸುಭಾಶ್ ಚಂದ್ರ ನಾಯಕ್ ಪಂದ್ಯಾಟವನ್ನು ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ರವಿಪ್ರಕಾಶ್, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ರವಿಶಂಕರ್ ಶಾಸ್ತ್ರಿ, ಪ್ರವೀಣ್, ಪ್ರಾಂಶುಪಾಲ ಸುಧೀರ್ ಕುಮಾರ್, ಮುಖ್ಯ ಶಿಕ್ಷಕಿ ಫೆಲ್ಸಿಟಾ ಇವಾ ಗಲ್ಬಾವೊ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಾಥ ವಿಟ್ಲ, ಉದ್ಯಮಿ ಸದಾಶಿವ ಆಚಾರ್ಯ, ಬಂಟ್ವಾಳ ದೈಹಿಕ ಶಿಕ್ಷಣ ಪರಿವರ್ತನಾ ಅಧಿಕಾರಿ ಆಶಾ ನಾಯಕ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕಾಂತಡ್ಕ, ರಾಷ್ಟ್ರೀಯ ಕಬಡ್ಡಿ ಆಟಗಾರ ಗೋಪಿನಾಥ್ ಕಾಪಿಕಾಡ್, ಸಿ ಆರ್ ಪಿ ಜ್ಯೋತಿ, ಹಸೈನಾರ್ ತಾಳಿತ್ತನೂಜಿ, ಜಯರಾಂ ಬಲ್ಲಾಳ, ತುಳಸಿದಾಸ್ ಶೆಣೈ, ರಜಿತ್ ಆಳ್ವ, ಗುರುರಾಜ್, ಇಂದು ಶೇಖರ್, ಸುರೇಶ್ ಶೆಟ್ಟಿ, ಶಿವಪ್ರಸಾದ್, ರವಿವರ್ಮ, ಸೇಸಪ್ಪ ಗೌಡ ಪಿ ಡಿ, ರಾಜೇಂದ್ರ ರೈ, ಅಶೋಕ ಭಟ್, ಜಯರಾಂ, ಅಖಿಲ್ ಶೆಟ್ಟಿ, ಅಶೋಕ ಅನಿಲಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ವಿದ್ಯಾಶಂಕರ್, ವಿಜಯಲಕ್ಷ್ಮಿ ಕಟೀಲು, ದಾಮೋದರ, ರಾಜೀವಿ, ರಾಷ್ಟ್ರೀಯ ಕಬಡ್ಡಿ ಪ್ರತಿಭೆಗಳಾದ ಕೀರ್ತಿ, ಚೈತನ್ಯ ಬಿ.ಎನ್., ಹಾಗೂ ಎಂಎಂಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಚಿಂತನ, ನವನೀತ್, ವೈನವಿ ಅವರನ್ನು ಸನ್ಮಾನಿಸಲಾಯಿತು.


ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಾರಿಜ ಬಿ.ಎ., ಶಿಕ್ಷಕ ನಿರಂಜನ ಕೇಶವ ನಾಯಕ್ ಹಾಗೂ ಶಿಕ್ಷಕಿ ಶ್ರೀಮತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುಜಾತ, ಅರುಣಾ, ಶಾರದೆ, ದೀಪಿಕಾ , ಶಾಮಿಲಿ ಮತ್ತು ದೈಹಿಕ ಶಿಕ್ಷಕ ಅರವಿಂದ್ ಸಹಕರಿಸಿದರು.








