Sunday, June 29, 2025
spot_imgspot_img
spot_imgspot_img

ಕಾರ್ಕಳ : ಓಮಿನಿ ಮತ್ತು ಆಲ್ಟೊ ಕಾರು ನಡುವೆ ಭೀಕರ ಅಪಘಾತ ; ಓರ್ವ ಗಂಭೀರ

- Advertisement -
- Advertisement -

ಕಾರ್ಕಳ : ಓಮಿನಿ ಮತ್ತು ಆಲ್ಟೊ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಗಂಭೀರ ಗಾಯಗೊಂಡಿದ್ದು, ಮತ್ತಿಬ್ಬರು ಸಣ್ಣಪುಟ್ಟ ಗಾಯಗೊಂಡ ಘಟನೆ ಸಾಣೂರು ಕೋಳಿ ಫಾರಂ ಸಮೀಪ ನಡೆದಿದೆ.

ಅವಘಡದಲ್ಲಿ ಓಮಿನಿ ಕಾರಿನಲ್ಲಿದ್ದ ಆಫ್ರಿದ್ ಅನ್ವಿಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗೂ ಅಶ್ವಿನ್ ಮತ್ತು ಅಗ್ಮ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆದ 10 ನಿಮಿಷಗಳೊಳಗಾಗಿ 108 ಅಂಬುಲೆನ್ಸ್ ಘಟನಾ ಸ್ಥಳಕ್ಕೆ ಆಗಮಿಸಿದೆಯಾದರೂ, ಗಾಯಾಳು ವಾಹನದೊಳಗೆ ಸಿಲುಕಿಕೊಂಡಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯಲು ತಡವಾಗಿತ್ತು ಎನ್ನಲಾಗಿದೆ.

- Advertisement -

Related news

error: Content is protected !!