Tuesday, June 23, 2026
spot_imgspot_img
spot_imgspot_img

ಕಾರ್ಕಳ: ತಿಂಡಿ ತಿಂದ ವ್ಯಕ್ತಿಯಲ್ಲಿ ಬಿಲ್ ಹಣ ಕೇಳಿದ್ದಕ್ಕೆ ಹಲ್ಲೆ ಮತ್ತು ಜೀವ ಬೆದರಿಕೆ

- Advertisement -
- Advertisement -

ಕಾರ್ಕಳ : ಮಿಯ್ಯಾರು ಕಂಬಳ ಸ್ಥಳದಲ್ಲಿ ಕಾಳು ಎಂಬಾತನು 4 ಪ್ಲೇಟ್‌ ತಿಂಡಿ ತಿಂದು ಹಣ ಕೊಡದೇ ಬಿಲ್‌ ಕೇಳಿದ್ದಕ್ಕೆ ಜೀವ ಬೆದರಿಕೆಯೊಡ್ಡಿರುವುದಾಗಿ ಕ್ಯಾಂಟೀನ್‌ ನಡೆಸುತ್ತಿದ್ದ ಮಿಯ್ಯಾರು ಮಂಗಲಪಾದೆಯ ಅಶ್ವಿನಿ ಎಂಬವರು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ.

ಮಿಯ್ಯಾರಿನಲ್ಲಿ ಸುಧಾಕರ, ವಿಜಯ ಎಂಬುವವರೊಂದಿಗೆ ಮಿನಿ ಕ್ಯಾಂಟಿನ್‌ ವ್ಯವಹಾರ ನಡೆಸುತ್ತಿದ್ದು, ರಾತ್ರಿ ಆನೆಕೆರೆಯ ಕಾಳು ಎಂಬಾತನು ತಿಂಡಿ ತಗೊಂಡಿರುತ್ತಾನೆ. ಬಿಲ್‌ ಕೇಳಿದಾಗ ಹಣ ಕೊಡುವುದಿಲ್ಲ. ನೀನು ಏನು ಮಾಡುತ್ತೀಯಾ ಹೆಂಗಸೆ ? ಎಂದು ಏರಿದ ಧ್ವನಿಯಲ್ಲಿ ಕೇಳಿದ್ದು, ಈ ವೇಳೆ ಅಲ್ಲಿದ್ದ ವಿಜಯ ಮತ್ತು ಸುಧಾಕರ ಅವರನ್ನು ದೂಡಿ ಹಾಕಿ ಕಲ್ಲಿನಿಂದ ತಲೆಗೆ ಹೊಡೆದಿರುತ್ತಾನೆ. ನನ್ನ ಕಾಲಿಗೆ ಕೂಡ ಕಲ್ಲು ಎತ್ತಿಹಾಕಿ, ಬಳಿಕ ಜೀವ ಬೆದರಿಕೆಯೊಡ್ಡಿರುವುದಾಗಿ ಅಶ್ವಿನಿಯವರು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!