- Advertisement -
- Advertisement -
ಮಂಜೇಶ್ವರ: ಹೋಟೆಲ್ ಮತ್ತು ಬೇಕರಿಗೆ ನುಗ್ಗಿ ಕಳವಿಗೆತ್ನಿಸಿದ ಘಟನೆ ತೂಮಿನಾಡಿನಲ್ಲಿ ನಡೆದಿದ್ದು, ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತೂಮಿನಾಡು ಮಾಸ್ಟರ್ ಮೈಂಡ್ ಜಂಕ್ಷನ್ ನ ಮೂಕಾಂಬಿಕಾ ಹೋಟೆಲ್ ಮತ್ತು ಹನಿ ಬೇಕರಿಗೆ ನುಗ್ಗಿದ ಕಳ್ಳನು ಕಳವಿಗೆತ್ನಿಸಿದ್ದಾನೆ.

ರಾತ್ರಿ ಹೋಟೆಲ್ ನ ಗಾಜುಗಳನ್ನು ಪುಡಿಗೈದು ಬಳಿಕ ಹಣಕ್ಕಾಗಿ ತಡಕಾಡಿದ್ದಾನೆ. ಒಳಭಾಗದಿಂದಲೇ ಬೇಕರಿಗೆ ನುಗ್ಗಿದ್ದು, ಕ್ಯಾಶ್ ಡ್ರವರನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾನೆ. ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು, ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕಳ್ಳನ ಗುರುತು ಪತ್ತೆಹಚ್ಚಲಾಗಿದ್ದು, ಈತನನ್ನು ಕುಂಜತ್ತೂರು ಮತ್ತು ತೂಮಿನಾಡು ಪರಿಸರದಲ್ಲಿ ಸ್ಥಳೀಯರು ಕಂಡಿದ್ದು, ಈತನ ಪತ್ತೆಗೆ ಪೊಲೀಸರು ನಿಗಾ ಇರಿಸಿದ್ದಾರೆ.


- Advertisement -








