Tuesday, July 8, 2025
spot_imgspot_img
spot_imgspot_img

ಸಮರ್ಪಣ್ ವಿಟ್ಲ ಸಂಘಟನೆಯ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಸಮರ್ಪಣ್ ನಿಲಯ ಗೃಹಪ್ರವೇಶ ರಾಜೇಶ್ ಭಟ್ ಇವರ ಪೌರೋಹಿತ್ಯದಲ್ಲಿ ನಡೆದ ಗೃಹಪ್ರವೇಶದಲ್ಲಿ ಮನೆ ನಿರ್ಮಾಣದಲ್ಲಿ ಸಹಕರಿಸಿದ ಮಹನೀಯರಿಗೆ ಗೌರವಾರ್ಪಣೆ

- Advertisement -
- Advertisement -

ಸಮರ್ಪಣ್ ವಿಟ್ಲ ಸಂಘಟನೆಯ ಸೇವಾ ಪ್ರಕಲ್ಪದಲ್ಲಿ ವಿಟ್ಲ ಕಸಬಾ ಗ್ರಾಮದ ಇರಂದೂರು ಎಂಬಲ್ಲಿ ಅರ್ಹ ಫಲಾನುಭವಿ ಕುಟುಂಬಕ್ಕೆ ನಿರ್ಮಿಸಿದ ಮನೆ ಸಮರ್ಪಣ್ ನಿಲಯದ ಗೃಹಪ್ರವೇಶ ಇಂದು 06-04-2025 ಭಾನುವಾರ ಬೆಳಿಗ್ಗೆ 7.30 ಕ್ಕೆ ಶ್ರೀ ರಾಜೇಶ್ ಭಟ್ ಇವರ ಪೌರೋಹಿತ್ಯ ದೊಂದಿಗೆ ಗಣಪತಿ ಹವನ ಹಾಗೂ ಹಾಲುಕ್ಕಿಸುವುದರೊಂದಿಗೆ ನಡೆಯಿತು. ಈ ಸಂದರ್ಭ ಮನೆ ನಿರ್ಮಾಣದಲ್ಲಿ ಸಹಕರಿಸಿದ ಮಹನೀಯರಾದ ಶ್ರೀ ಧನಂಜಯ ನೆಕ್ಕರೆ ಕಾಡು, ರವಿ ಅಂಚನ್ , ಕೀರ್ತನ್ ಸಣ್ಣಗುತ್ತು , ತೀರ್ಥೆಶ್, ಮಹೇಶ್ , ಮೊದಲಾದವರನ್ನು ಸಮರ್ಪಣ್ ವಿಟ್ಲ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮರ್ಪಣ್ ವಿಟ್ಲ ಇದರ ಉಪಾಧ್ಯಕ್ಷರಾದ ರವಿವರ್ಮ ವಿಟ್ಲ ಅರಮನೆ, ಯಾದವ ಮಡಿವಾಳಕೋಡಿ , ಕೋಶಾಧಿಕಾರಿ ನಿಖಿಲ್ ಸಾಲ್ಯಾನ್, ಕಾರ್ಯದರ್ಶಿ ರೋಹಿತ್ ಕಟ್ಟೆ, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಪವನ್ ಕಟ್ಟೆ, ಗೌರವ ಸಲಹೆಗಾರ ವಿಶ್ವನಾಥ್ ನಾಯ್ತೊಟ್ಟು,ಸಂಚಾಲಕರಾದ ಹರೀಶ್ .ಕೆ ವಿಟ್ಲ, ಹಾಗೂ ನವಚೇತನ ಗೆಳೆಯರು ಬಳಗ ಇರಂದೂರು ಪಡೀಲ್ , ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ ( ರಿ ) ಮಾಮೇಶ್ವರ ಇದರ ಅಧ್ಯಕ್ಷರು ಶ್ರೀ ವೀರಪ್ಪಗೌಡ ರಾಯರ ಬೆಟ್ಟು , ಬಂಟ್ವಾಳ ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷರಾದ ಶ್ರೀ ಡಾ. ಸಿ ಕೆ ಗೌಡ , ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಮೋಹನ್ ಇಂದ್ರಪಡ್ಪು , ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು, ಮಾಜಿ ಯೋಧರುಗಳಾದ ಬಾಲಕೃಷ್ಣ ಪೊನ್ನೆತ್ತಡಿ , ಶ್ರೀ ಕುಶಾಲಪ್ಪ ನಾಯ್ತೊಟ್ಟು, ವಿಟ್ಲ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಹರೀಶ್ ಕಟ್ಟೆ , ವಿಶ್ವಸ್ಥ ಮಂಡಳಿಯ ಸದಸ್ಯರಾದ ಮೋನಪ್ಪಗೌಡ ರಾಯರ ಬೆಟ್ಟು , ರವಿ ಅಂಚನ್ ಮಾಡ್ತೇಲು, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಉಪಾಧ್ಯಕ್ಷರಾದ ಶಶಿಧರ ಗೌಡ ಕೈಂತಿಲ, ಕಾರ್ಯದರ್ಶಿ ಸಂಪತ್ ಮಾಮೇಶ್ವರ, ನವ ಚೇತನ ಗೆಳೆಯರ ಬಳಗ ಪಡೀಲ್ ಇದರ ಅಧ್ಯಕ್ಷರಾದ ಚರಣ್ ಪಡೀಲ್ ಮಾಜಿ ಅಧ್ಯಕ್ಷರಾದ ಅಶೋಕ್ ಪಡೀಲ್ , ತೀರ್ಥೇಶ್ ಇರಂದೂರು, ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ ಸಂಚಾಲಕರಾದ ಪ್ರಶಾಂತ್ ಅಡ್ಡಾಳಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್ ನವಗ್ರಾಮ, ಶರಣಂ ಕನ್ಸ್ಟ್ರಕ್ಷನ್ ಇರಂದೂರು ಮಾಲಕರಾದ ಮೋಹನ್ ಚಂದ್ರ ಇರಂದೂರು, ವಿಟ್ಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಜಲಜಾಕ್ಷಿ ಪೊನ್ನೆತ್ತಡಿ, ಅಂಗನವಾಡಿ ಶಿಕ್ಷಕಿ ಶ್ರೀಮತಿ ಕಲ್ಯಾಣಿ ವೀರಪ್ಪಗೌಡ ರಾಯರ ಬೆಟ್ಟು, ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್( ರಿ.) ಇರಂದೂರು, ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ ಇದರ ಪ್ರಮುಖರು ಉಪಸ್ಥಿತರಿದ್ದರು.

ಗ್ರಾಮದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟ ಸಮರ್ಪಣ್ ವಿಟ್ಲ ಸಂಘಟಯ ಅಧ್ಯಕ್ಷರು ಯಶವಂತ್ ಯನ್ ಹಾಗೂ ಗೌರವಾಧ್ಯಕ್ಷ ರಾದ ಕೃಷ್ಣಯ್ಯ ವಿಟ್ಲ ಅರಮನೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

- Advertisement -

Related news

error: Content is protected !!