Tuesday, July 21, 2026
spot_imgspot_img
spot_imgspot_img

ವೀರಕಂಬ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ

- Advertisement -
- Advertisement -

ಬಡ ಕುಟುಂಬಕ್ಕೆ ವಿಟ್ಲ ಠಾಣಾ ಪೊಲೀಸರಿಂದ ಸಹಾಯಹಸ್ತ

ವಿಟ್ಲ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಫೆ:10 ರಂದು ವೀರಕಂಭ ಗ್ರಾಮದ ಗಣೇಶ್ ಕೋಡಿ ಎಂಬಲ್ಲಿ ನಡೆದಿತ್ತು. ಗಣೇಶ್ ಕೋಡಿ ನಿವಾಸಿ ರಾಜೇಶ್ವರಿ ಅವರ ಮನೆಯಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದ ಬಟ್ಟೆ-ಬರೆ ಸೇರಿದಂತೆ ದಿನನಿತ್ಯ ಉಪಯೋಗದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.

ಈ ಘಟನೆಯಿಂದ ಕಂಗಾಲಾಗಿದ್ದ ಇವರಿಗೆ, ವಿಟ್ಲ ಠಾಣೆಯ ಎಲ್ಲಾ ಸಿಬ್ಬಂದಿಗಳು ತಮ್ಮ ದುಡಿಮೆಯಲ್ಲಿ ಕೈಲಾದಷ್ಟು ದೇಣಿಗೆಯನ್ನು ಒಟ್ಟು ಸೇರಿಸಿ ಮಹಿಳೆಗೆ ಮೊತ್ತವನ್ನು ಹಸ್ತಾಂತರಿಸಿದ್ದಾರೆ. ವಿಟ್ಲ ಠಾಣಾ ಪೊಲೀಸರ ಈ ಕಾರ್ಯವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಹಿಂದೆ ವಿಟ್ಲ ಠಾಣಾ ಇನ್ಸ್ಪೆಕ್ಟರ್‍ ಪ್ರಕಾಶ್ ದೇವಾಡಿಗ ರವರು ತಾವೇ ಸ್ವತಃ ಮಹಿಳೆಗೆ ಸಹಾಯಹಸ್ತ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇನ್ನೂ ಯಾರಾದರೂ ಈ ಕುಟುಂಬಕ್ಕೆ ನೆರವು ನೀಡಲು ಬಯಸಿದರೆ 9108587613 ನಂಬರಿಗೆ ಸಂಪರ್ಕಿಸಿ ಸಹಾಯ ಮಾಡಲು ವಿನಂತಿಸಲಾಗಿದೆ.

- Advertisement -

Related news

error: Content is protected !!