Saturday, April 20, 2024
spot_imgspot_img
spot_imgspot_img

ಪತ್ನಿ ಮಗುವಿಗೆ ಹಾಲುಣಿಸುತ್ತಿರುವ ವೇಳೆ ಎದೆಗೆ ಇರಿದ ಪಾಪಿ ಪತಿ !

- Advertisement -G L Acharya panikkar
- Advertisement -

ಹುಬ್ಬಳ್ಳಿ: ಪತ್ನಿ ತನ್ನ ಮಗುವಿಗೆ ಹಾಲುಣಿಸುತ್ತಿರುವ ಸಂದರ್ಭದಲ್ಲಿಯೇ ಆಕೆಯ ಎದೆಗೆ ಬ್ಲೇಡ್ ನಿಂದ ಇರಿದ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ಸೆಟ್ಲಮೆಂಟ್ ನಗರದಲ್ಲಿ ಈ ಘಟನೆ ನಡೆದಿದ್ದು, ಸುನೀಲ್ ಎಂಬಾತ ಪತ್ನಿ ರಂಜಿತಾಳ ಮೇಲೆ ಈ ದಾಳಿ ನಡೆಸಿದ್ದಾನೆ. ಪತಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಪತ್ನಿಯನ್ನು ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೌಟುಂಬಿಕ ಮನಸ್ತಾಪದಿಂದ ಸುನೀಲ್ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದ್ದು, ತನ್ನ ಮಗುವಿಗೆ ಹಾಲು ನೀಡುತ್ತಾ ಪತ್ನಿ ಕುಳಿತುಕೊಂಡಿದ್ದಳು. ಈ ವೇಳೆ ಏಕಾಏಕಿ ಆರೋಪಿಯು ಆಕೆಯ ಎದೆಗೆ ಬ್ಲೇಡ್ ನಿಂದ ತೀವ್ರವಾದ ಗಾಯಗೊಳಿಸಿದ್ದಾನೆ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!