Tuesday, September 1, 2026
spot_imgspot_img
spot_imgspot_img

ಪೈಲಟ್ ನ ಚಾಣಾಕ್ಷತನದಿಂದ ತಪ್ಪಿದ ವಿಮಾನ ದುರಂತ!

- Advertisement -
- Advertisement -

ಹುಬ್ಬಳ್ಳಿ: ಕಣ್ಣೂರಿನಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತಲುಪಬೇಕಾದ ಇಂಡಿಗೋ ವಿಮಾನ ತಪ್ಪು ಲ್ಯಾಂಡಿಂಗ್ ಮಾಡಲು ಹೋಗಿ, ನೋಸ್ ಟೈರ್ ಆಪ್ ಶೂಟ್ ಆಗಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಪೈಲಟ್ ನ ಚಾಣಾಕ್ಷತನದಿಂದ ವಿಮಾನದಲ್ಲಿದ್ದ 5 ಪ್ರಯಾಣಿಕರು ದೊಡ್ಡ ದುರಂತದಿಂದ ಪಾರಾಗಿದ್ದಾರೆ.

ಇಂಡಿಗೋ ವಿಮಾನವು ಕಣ್ಣೂರಿನಿಂದ ಬೆಂಗಳೂರಿಗೆ ಹೋಗುತಿದ್ದ ವೇಳೆ ಹುಬ್ಬಳ್ಳಿಯಿಂದ 18 ಪ್ಯಾಸೆಂಜರ್ ನ್ನು ಕರೆದುಕೊಂಡು ಪ್ರಯಾಣ ಬೆಳೆಸಬೇಕಿತ್ತು. ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ವೇಳೆಯಲ್ಲಿ ಸುಮಾರು 200 ಮೀಟರ್ ಮುಂದೆ ಬಂದು ಲ್ಯಾಂಡ್ ಆಗಿದ್ದು, ಈ ಸಮಯದಲ್ಲಿ ನೋಸ್ ಟೈರ್ ಶೂಟ್ ಆಪ್ ಆಗಿದೆ. ಈ ವೇಳೆ ಲ್ಯಾಂಡಿಂಗ್ ಆಗುತ್ತಿದ್ದ ವಿಮಾನವನ್ನ ಮತ್ತೆ ಟೇಕ್ ಆಪ್ ಮಾಡಿದ, ಪೈಲಟ್, ಸಾವಕಾಶವಾಗಿ ವಿಮಾನವನ್ನು ಮತ್ತೆ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಆದರೆ, ನೋಸ್ ಟೈರ್ ಸ್ಪೋಟಗೊಂಡಿದ್ದರಿಂದ ಮುಂದಿನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

ಇದರಿಂದಾಗಿ ಹುಬ್ಬಳ್ಳಿಯಿಂದ ಹೋಗುತ್ತಿದ್ದ 18 ಪ್ರಯಾಣಿಕರು ತಮ್ಮ ಪ್ರಯಾಣವನ್ನು ರದ್ದುಗೊಳಿಸಿ, ಮರಳಿ ಹೋದ ಘಟನೆಯೂ ನಡೆದಿದೆ. ಘಟನೆಗೆ ಸಂಬಂದಿಸಿದಂತೆ ಡಿಸಿಜಿ ತಂಡವೂ ತನಿಖೆ ಮಾಡುವ ಸಾಧ್ಯತೆಯಿದೆ.

- Advertisement -

Related news

error: Content is protected !!