Thursday, April 25, 2024
spot_imgspot_img
spot_imgspot_img

ಭಾರತದ ಮೊಟ್ಟ ಮೊದಲ ಮಾನವ ರಹಿತ ಗಗನಯಾನ

- Advertisement -G L Acharya panikkar
- Advertisement -

2021ರ ಡಿಸೆಂಬರ್‌ನಲ್ಲಿ ಭಾರತದ ಮೊಟ್ಟ ಮೊದಲ ಮಾನವ ರಹಿತ ಗಗನಯಾನಕ್ಕೆ ಚಾಲನೆ ದೊರೆಯಬೇಕಿತ್ತು, ಆದರೆ 2022ರ ಜೂನ್ ಒಳಗೆ ಗಗನಯಾನ ಆರಂಭಗೊಳ್ಳಲಿದೆ ಎಂದು ಇಸ್ರೋ ಚೇರ್‌ಮೆನ್ ಕೆ ಶಿವನ್ ತಿಳಿಸಿದ್ದಾರೆ.

ಈ ಯೋಜನೆಗೆ 2020ರ ಡಿಸೆಂಬರ್‌ನಲ್ಲೇ ಚಾಲನೆ ನೀಡಬೇಕಿತ್ತು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕದಿ0ದಾಗಿ ಈ ಯೋಜನೆ ಒಂದು ವರ್ಷ ಮುಂದೂಡಲಾಗಿತ್ತು, ಇದೀಗ ಅದೇ ಕಾರಣ ನೀಡಿ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಗಗನಯಾನವನ್ನು ಮುಂದೂಡಲಾಗಿದೆ. ಗಗನಯಾನ ಯೋಜನೆಗೆ 10,000 ಕೋಟಿ ರೂಗಳನ್ನು ಮೀಸಲಿಡಲಾಗಿದ್ದು, 2022ರ ವೇಳೆಗೆ ಭಾರತದ ಮೂರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಅಧ್ಯಯನ ನಡೆಸಲಾಗುತ್ತದೆ.

ಇನ್ನು 2022ಕ್ಕೆ ಭಾರತ 75ನೇ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಲಿದ್ದು, ಈ ಮಹತ್ವದ ವರ್ಷದಲ್ಲೇ ಭಾರತದ ಮಹತ್ವಾಕಾಂಕ್ಷಿ ಗಗನಯಾನ ಕೂಡ ಆರಂಭವಾಗಲಿದೆ. ಈಗಾಗಲೇ ಇದೇ ವಿಚಾರವಾಗಿ ಇಸ್ರೋ ಕೂಡ ಕಾರ್ಯನಿರತವಾಗಿದ್ದು, ಮೊದಲು ಮಾನವ ರಹಿತ ಗಗನಯಾನ ಯೋಜನೆಯನ್ನು 2020ರ ಡಿಸೆಂಬರ್ ನಲ್ಲಿ ಚಾಲನೆ ಮಾಡಲು ಉದ್ದೇಶಿಸಲಾಗಿತ್ತು.

ಎರಡನೇ ಮಾನವ ರಹಿತ ಯೋಜನೆಯನ್ನು 2021ರ ಜೂನ್‌ನಲ್ಲಿ ಯೋಜಿಸಲು ಉದ್ದೇಶಿಸಲಾಗಿತ್ತು. ಯೋಜನೆಯ ಪ್ರಮುಖ ಮತ್ತು ನಿರ್ಣಾಯಕ ಮಾನವ ಸಹಿತ ಗಗನಯಾನ ಯೋಜನೆಯನ್ನು ಆರು ತಿಂಗಳ ಬಳಿಕ ಅಂದರೆ 2021ರ ಡಿಸೆಂಬರ್ ನಲ್ಲಿ ಚಾಲನೆ ನೀಡಲು ಯೋಜಿಸಲಾಗಿತ್ತು. ಇದೀಗ ಈ ಯೋಜನೆಯ ಡೆಡ್ ಲೈನ್ 2022ಕ್ಕೆ ಮುಂದೂಡಿದೆ.

ಕೇವಲ ಗಗನಯಾನ ಮಾತ್ರವಲ್ಲದೇ ಚಂದ್ರಯಾನ-3 ಸೇರಿದಂತೆ ಇಸ್ರೋದ ಬಹಳಷ್ಟು ಯೋಜನೆಗಳೂ ಕೂಡ ಕೊರೋನಾ ಸಾಂಕ್ರಾಮಿಕದಿ0ದಾಗಿ ಮುಂದೂಡಲ್ಪಟ್ಟಿವೆ ಎಂಬುದು ತಿಳಿದು ಬಂದಿದೆ.

driving
- Advertisement -

Related news

error: Content is protected !!