Friday, April 26, 2024
spot_imgspot_img
spot_imgspot_img

ಹ್ಯೂಮನ್ ವೆಲ್ಫೇರ್ ಫೌಂಡೇಶನ್ ವತಿಯಿಂದ ಎಸ್ಸಸ್ಸೆಲ್ಸಿ ಹಾಗೂ ಪಿಯುಸಿ ನಂತರ ಮುಂದೇನು?

- Advertisement -G L Acharya panikkar
- Advertisement -

ಬಂಟ್ವಾಳ: ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಇದರ ವತಿಯಿಂದ SSLC & PUC ಮುಂದೇನು? ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮ ಅನದಾನಿತ ಪ್ರಾಥಮಿಕ ಶಾಲೆ ಅಮುಂಜೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಸ್ಥಾಪಕಾಧ್ಯಕ್ಷರಾದ ಇಬ್ರಾಹಿಂ ನವಾಜ್ ವಹಿಸಿದರು ಸಮಿತಿಯ ಸಲಹೆಗಾರರಾದ ಹಕೀಮ್ ತಾಳಿಪ್ಪಾಡಿ ರವರು ಸ್ವಾಗತಿಸಿದರು ಸಮಿತಿಯ ಪ್ರ.ಕಾರ್ಯದರ್ಶಿ ಆರಿಫ್ ಕಮ್ಮಾಜೆ ವಿಷಯ ಮಂಡಿಸಿದರು. ಬಂಟ್ವಾಳ ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಶ್ರೀನ್ ಮೇಡಂ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಿತಿ ಕೋಶಧಿಕಾರಿ ಹಮೀದ್ ವರಕೋಡಿ ನಿರೂಪಿಸಿದರು.


ಶಿಕ್ಷಣ ತಜ್ಞರುಹಾಗು ಸಮಾಜಸೇವಕರಾದ ರಫೀಕ್ ಮಾಸ್ಟರ್ SSLC ಹಾಗೂ PUC ವಿಧ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹ್ಯಾದ್ರಿ ಇಂಜಿನಿಯರ್ ಕಾಲೇಜು ಇದರ ನಿರ್ದೇಶಕರಾದ ದೇವ್’ದಾಸ್ BE. ಮಂಗಳೂರು ಮನಪಾ ಸಹಾಯಕ ಇಂಜಿನಿಯರ್ ಅಬ್ದುಲ್ ಖಾದರ್, ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರಾದ ಅಬೂಬಕ್ಕರ್ ಅಮುಂಜೆ. ಮಾತಾನಾಡಿ ಶುಭ ಹಾರೈಸಿದರು.

“ಎಸ್ಸಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರಥಮ,ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಸನ್ಮಾನಿಸಲಾಯಿತು.ಹಾಗೂ ಕಾಲಲ್ಲಿ ಎಸ್ಸಸ್ಸೆಲ್ಸಿ ಪರೀಕ್ಷೆ ಬರೆದ ಕೌಶಿಕ್ ಆಚಾರ್ಯ ರವರಿಗೆ ಸನ್ಮಾನಿಸಲಾಯಿತು.


ಅಮುಂಜೆ ಗ್ರಾಮ ಪಂಚಾಯತ್ ನಿಕಪೂರ್ವ ಅಧ್ಯಕ್ಷರಾದ ಪ್ರೇಮಲತಾ
ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಮುಡೈಕೋಡಿ,
ಚಂದ್ರಶೇಖರ್ ಭಂಡಾರಿ, ಕಲಾಯಿ ಕೆ.ಎಂ ಅಬೂಬಕ್ಕರ್ ಅಮುಂಜೆ, ಅಮುಂಜೆ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಅಬ್ದುಲ್ ರಝಾಕ್ ಕಲಾಯಿ, ಅಮುಂಜೆ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಹರೀಶ್ ಅಮುಂಜೆ, ಬಿ.ಎ ಹಮೀದ್ ಮುಡೈಕೋಡಿ, ನವಾಝ್ ಮುಡೈಕೋಡಿ, HWF ಸಲಹೆಗಾರದ ಬಶೀರ್ ಅಹ್ಮದ್ ಗಾಣೆಮಾರ್, ಸಂಸ್ಥೆಯ ಕಾರ್ಯಧ್ಯಕ್ಷ ಅಲ್ತಾಫ್ ಪಂಚಮೆ, ಉಪಾಧ್ಯಕ್ಷ ರಮ್ಲಾನ್ ಕಲಾಯಿ, ಸಂಘಟನಾ ಕಾರ್ಯದರ್ಶಿ ಶರೀಫ್ ಬಡಕಬೈಲ್ ನಾಸಿರ್ ಕಲಾಯಿ, ಹನೀಫ್ ಕಲಾಯಿ, ಹಾಗೂ ಸಮಿತಿಯ ಎಲ್ಲಾ. ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!