Monday, May 6, 2024
spot_imgspot_img
spot_imgspot_img

ಪುತ್ತೂರು: ಬೇಟೆಗಾರರು ಕಾಡುಕೋಣಗಳ ಮಾಂಸ ಮಾಡಿ ಕೇರಳಕ್ಕೆ ಸಾಗಿಸುವ ದಂಧೆ : ಡಿಸಿಎಫ್ ಮಂಗಳೂರು ಖಡಕ್‌ ವಾರ್ನಿಂಗ್‌

- Advertisement -G L Acharya panikkar
- Advertisement -

ಪುತ್ತೂರು ತಾಲೂಕಿನ ಕೇರಳ ಗಡಿಗ್ರಾಮಗಳಲ್ಲಿ ನೆಟ್ಟಣಿಗೆ ಮುಡೂರು, ಪಾಣಾಜೆ, ಜಾಲ್ಕೂರು ಗಡಿಗ್ರಾಮಗಳಲ್ಲಿ ಕಾಡುಕೋಣಗಳ ಹಾವಳಿ ಇದ್ದು, ಕಾಡುಕೋಣಗಳು ಗುಂಪುಗುಂಪಾಗಿ ರಾತ್ರಿ ವೇಳೆ ಕೆಲವೊಮ್ಮೆ ಹಗಲು ವೇಳೆಯೇ ನಾಡಿಗೆ ಬಂದು ಕೃಷಿಗಳನ್ನು ತಿಂದು ಹಾಕುತ್ತಿದೆ. ಈ ವಿಚಾರವನ್ನು ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಹೇಳುತ್ತಲೇ ಇದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದರೂ ಕೂಡ ವ್ಯವಸ್ಥೆ ಮಾಡುವ ಎಂದು ತಲೆ ಆಡಿಸುತ್ತಲೇ ಕಾಲ ಕಳೆಯುತ್ತಿದ್ದಾರೆ. ಕಾಡು ಕೋಣಗಳು ನಾಡಿಗೆ ಬರದಂತೆ ತಡೆಗಟ್ಟುವುದು ಬಿಡಿ ಆ ಗ್ರಾಮಗಳಿಗೆ ತೆರಳಿ ಪರಿಶೀಲನೆ ಮಾಡಲು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಸಮಯ ಕೂಡಿ ಬರುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.

ರಾತ್ರಿ ವೇಳೆ ಕೆಲವೊಂದು ಆಯಕಟ್ಟಿನ ಸ್ಥಳಗಳಿಂದಲೇ ಕಾಡುಕೋಣಗಳು ಬರುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳುವ ಬೇಟೆಗಾರರು ರಾತ್ರಿ ವೇಳೆ ಅವುಗಳನ್ನು ಗುಂಡು ಹೊಡೆದು ಸಾಯಿಸುತ್ತಾರೆ. ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ಅವುಗಳನ್ನು ಕೊಲ್ಲುವ ಮತ್ತು ಆ ಬಳಿಕ ಮಾಂಸ ಮಾಡಿ ಕೇರಳಕ್ಕೆ ಸಾಗಿಸುವ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ. ಈಗಾಗಲೇ ನೂರಾರು ಕಾಡುಕೋಣಗಳನ್ನು ಭೇಟೆಗಾರರು ಕೊಂದು ಮುಗಿಸಿದ್ದಾರೆ ಎಂಬ ಆತಂಕದ ಮಾಹಿತಿಯನ್ನು ಗ್ರಾಮಸ್ಥರು ಹೊರ ಹಾಕಿದ್ದಾರೆ. ಕಾಡುಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಬೇಟೆಗಾರರ ಜೊತೆ ಕೆಲವೊಂದು ಮೇಲಧಿಕಾರಿಗಳಿಗೆ ಕೈ ಜೋಡಿಸಿ ಇರುವುದರಿಂದ ಇದೊಂದು ವ್ಯವಹಾರಿಕ ದಂಧೆಯಾಗಿ ಪರಿಣಮಿಸಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಕಾಡುಕೋಣಗಳ ನಾಶವಾದರೂ ಅಚ್ಚರಿಯಿಲ್ಲ. ಈ ಪರಿಸ್ಥಿತಿ ತಲೆದೋರುವ ಮುನ್ನ ಜಿಲ್ಲಾಮಟ್ಟದ ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಆಂಟನಿ ಮರಯಪ್ಪನ್, ಡಿಸಿಎಫ್ ಮಂಗಳೂರು ಖಡಕ್‌ ವಾರ್ನಿಂಗ್‌
ಈ ವಿಚಾರದಲ್ಲಿ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಕಾಡುಕೋಣಗಳು ಸೇರಿದಂತೆ ಕಾಡುಪ್ರಾಣಿಗಳನ್ನು ಭೇಟೆಯಾಡುವುದು ಅಕ್ಷಮ್ಯ ಅಪರಾಧವಾಗಿದೆ. ನೆಟ್ಟಣಿಗೆ ಮುಡೂರು, ಪಾಣಾಜೆ, ಜಾಲ್ಕೂರು ಹಾಗೂ ಕರ್ನೂರು ಗಡಿಗ್ರಾಮದಲ್ಲಿ ವಿಶೇಷ ತಪಾಸಣೆ ಮಾಡುವಂತೆ ಕ್ರಮಕೈಗೊಳ್ಳುತ್ತೇನೆ. ಸಾರ್ವಜನಿಕರು ಇಂಥಹ ಕೃತ್ಯಗಳು ಕಂಡು ಬಂದಲ್ಲ ನೇರವಾಗಿ ನನಗೆ ಕರೆ ಮಾಡಿ ತಿಳಿಸಬಹುದು ಎಂದಿದ್ದಾರೆ.

- Advertisement -

Related news

error: Content is protected !!