Tuesday, May 21, 2024
spot_imgspot_img
spot_imgspot_img

ಬಾಲಕಿಯನ್ನು ಬಲವಂತಾಗಿ ಎಲಿವೇಟರ್​ ಒಳಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ!

- Advertisement -G L Acharya panikkar
- Advertisement -

ಹೈದರಾಬಾದ್​: ಅಪರಿಚಿತನೊಬ್ಬ ಅಪಾರ್ಟ್​ಮೆಂಟ್​ನ ಫ್ಲ್ಯಾಟ್​ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಹೆಣ್ಣು ಮಗುವನ್ನು ಬಲವಂತಾಗಿ ಎಲಿವೇಟರ್​ ಒಳಗೆ ಎಳೆದುಕೊಂಡು ಅಸಭ್ಯವಾಗಿ ವರ್ತಿಸಿರುವ ಘಟನೆ ಮಿಯಾಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಸ್ಥಾನದ ಗೋರಖ್​ಪುರ್​ ಮೂಲದ ಗೊರಕ್​ ಪ್ರಸಾದ್​ ಮತ್ತು ರೇಣುಕಾ ಕಳೆದು 10 ವರ್ಷಗಳಿಂದ ಮಿಯಾಪುರ್​ನ ಹಫೀಜ್​ಪೇಟೆಯ ಅಪಾರ್ಟ್​ಮೆಂಟ್​ ಒಂದರಲ್ಲಿ ವಾಸವಿದ್ದಾರೆ. ದಂಪತಿಗೆ ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ.

ಐದು ವರ್ಷದ ಪುತ್ರಿ ತಮ್ಮ ಫ್ಲ್ಯಾಟ್​ ಮುಂದೆ ಆಟವಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಅಪಾರ್ಟ್​ಮೆಂಟ್​ ಒಳಗೆ ತೆರಳಿ ಬಾಲಕಿಗೆ ಚಾಕೋಲೆಟ್​ ನೀಡಿದ್ದು, ಬಳಿಕ ಆಮಿಷವೊಡ್ಡಿ ಬಲವಂತವಾಗಿ ಎಲಿವೇಟರ್​ ಒಳಗೆ ಎಳೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ತಕ್ಷಣ ಬಾಲಕಿ ಕಿರುಚಿಕೊಂಡಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.ಈ ಘಟನೆಯ ಬಗ್ಗೆ ಬಾಲಕಿ ಪಾಲಕರ ಮುಂದೆ ಹೇಳಿದ್ದಾಳೆ. ಸಿಸಿಟಿವಿಯನ್ನು ಪರಿಶೀಲಿಸಿದಾಗ ಆರೋಪಿಯ ದುಷ್ಕೃತ್ಯವು ಅದರಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮಿಯಾಪುರ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!