Sunday, June 28, 2026
spot_imgspot_img
spot_imgspot_img

“I Love Taliabani” ಎಂದು ಫೇಸ್ ಬುಕ್‌ನಲ್ಲಿ ಪೋಸ್ಟ್; ಯುವಕನ ವಿರುದ್ಧ ಆಕ್ರೋಶ!

- Advertisement -
- Advertisement -

ಬಾಗಲಕೋಟೆ : ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಉಗ್ರರ ವಶವಾಗಿದ್ದು, ಹಿಂಸಾಚಾರಗಳು ನಡೆಯುತ್ತಿದೆ. ತಾಲಿಬಾನ್ ಪರವಾಗಿ ಸ್ಟೇಟಸ್ ಹಾಕಿದ ಕರ್ನಾಟಕದ ಯುವಕನಿಗೆ ಸಂಕಷ್ಟ ಎದುರಾಗಿದೆ. ಬಾಗಲಕೋಟೆಯ ಆಸೀಫ್ ಗಲಗಲಿ ಎಂಬ ಯುವಕ ಫೇಸ್ ಬುಕ್‌ನಲ್ಲಿ “ಐ ಲವ್ ತಾಲಿಬಾನಿ” ಎಂದು ಸ್ಟೇಟಸ್ ಹಾಕಿದ್ದಾನೆ. ಈಗ ಮುಸ್ಲಿಂ ಸಮುದಾಯದ ಯುವಕರೇ ಆಸೀಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಕೊಂಡು ಬಂಧಿಸಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ರೈಲು ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸಾವು

ಆಸೀಫ್ ಗಲಗಲಿ ಹಾಕಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವಾರು ಜನರು ಆಸೀಫ್ ಬಂಧನಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಸದ್ಯ ಆಸೀಫ್ ಪರಾರಿಯಾಗಿದ್ದಾನೆ. ಪೊಲೀಸರು ಆಸೀಫ್ ಗಲಗಲಿ ಪೋಷಕರು, ಸಂಬ0ಧಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆಸೀಫ್‌ಗಾಗಿ ಹುಡುಕಾಟ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಮುಸ್ಲಿಂ ಸಮುದಾಯದ ಯುವಕರೇ ಆಸೀಫ್ ತರಾಟೆಗೆ ತೆಗೆದುಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಇದನ್ನೂ ಓದಿ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಕಿಟಕಿಗೆ ಕಲ್ಲೆಸೆದ ದುಷ್ಕರ್ಮಿಗಳು

ಮಹಮದ್ ಯಾಕುಬ್ ಎಂಬುವವರು ವಿಡಿಯೋವೊಂದನ್ನು ಮಾಡಿದ್ದು, ಅವನಿಗೆ ಅಫ್ಘಾನಿಸ್ತಾನ ಅಷ್ಟು ಇಷ್ಟವಿದ್ದರೆ ಅಲ್ಲೇ ಹೋಗಿ ಬದುಕಲಿ. ಇಂತಹವರಿ0ದ ಸಮುದಾಯ ತಲೆ ತಗ್ಗಿಸುವಂತೆ ಆಗಿದೆ. ಆಸೀಫ್ ಬಂಧಿಸಿ ಎಂದು ಜಮಖಂಡಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆಸೀಫ್ ಗಲಗಲಿಯಿಂದ ಸಮಯದಾಯದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ಆತನ ವಿರುದ್ಧ ದೇಶದ್ರೋಹದ ಕೇಸ್ ಹಾಕಿ. ಈ ರೀತಿ ಸ್ಟೇಟಸ್ ಹಾಕುವವರಿಗೆ ಪಾಠವಾಗಬೇಕು. ಗಲಗಲಿ ಹುಡುಕಿ ಬಂಧಿಸಿ ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ. ದೇಶದ ವಿಚಾರಕ್ಕೆ ಬಂದಾಗ ಸಿಡಿದೇಳುವುದು ಮುಖ್ಯ. ದೇಶದ್ರೋಹಿಗಳ ವಿರುದ್ಧ ಸದಾ ಧ್ವನಿ ಎತ್ತಬೇಕು ಎಂದು ಆಸೀಫ್ ಗಲಗಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Related news

error: Content is protected !!