Friday, August 21, 2026
spot_imgspot_img
spot_imgspot_img

ಮೋದಿ, ಅಮಿತ್ ಶಾ ಟೆಲಿಪ್ರಾಂಪ್ಟರ್ ಇಲ್ಲದೆ ಪೂರ್ತಿ ವಂದೇ ಮಾತರಂ ಹಾಡಿದರೆ ರಾಜೀನಾಮೆ ಕೊಡ್ತೀನಿ: ಪ್ರಿಯಾಂಕ್ ಖರ್ಗೆ ಸವಾಲ್

- Advertisement -
- Advertisement -

ಬೆಂಗಳೂರು: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಂದೇ ಮಾತರಂ ಗೀತೆಯನ್ನು ಟೆಲಿಪ್ರಾಂಪ್ಟರ್ ಇಲ್ಲದೇ ಪೂರ್ತಿ ಹಾಡಿದ್ರೆ ನಾನು ರಾಜೀನಾಮೆ ಕೊಡ್ತೀನಿ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದ್ದಾರೆ.

ವಂದೇ ಮಾತರಂ ಗೀತೆ ಎರಡೇ ಪ್ಯಾರ ಹಾಡುವ ಕಾಂಗ್ರೆಸ್ ನಿರ್ಣಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 1937 ರಲ್ಲಿ ಸರ್ದಾರ್ ಪಟೇಲ್, ನೆಹರೂ, ಬೋಸ್, ಟ್ಯಾಗೂರ್ ಸೇರಿ ಒಂದು ತೀರ್ಮಾನಕ್ಕೆ ಬಂದರು. ಎರಡು ಪ್ಯಾರ ಅಂತ ತೀರ್ಮಾನ ಮಾಡಿದ್ರು. ಅದನ್ನ ನಾವು ಅಳವಡಿಸಿಕೊಂಡು ಬರ್ತಾ ಇದ್ದೇವೆ‌. ಎಂದೂ ಇಲ್ಲದ ದೇಶಪ್ರೇಮ ಎಲ್ಲಿಂದ ಉಕ್ಕಿ ಬರುತ್ತಿದೆ. ಬಿಜೆಪಿ ಅವರು ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡೋಕೆ ಹೇಳಿ. ಅವರಿಗೆ ಬರುತ್ತಾ ನಾನು ನೋಡ್ತೀನಿ. ಕೊನೆ ಪಕ್ಷ ಮೊದಲ ಎರಡು ಪ್ಯಾರ ಆದ್ರು ಹೇಳಲಿ. ಲಾಸ್ಟ್ ಎರಡನೇ ‌ಪ್ಯಾರ ನನಗೂ ಗೊತ್ತಿಲ್ಲ. ಇತ್ತೀಚೆಗೆ ಕಾನೂನಾತ್ಮಕವಾಗಿ ಶುರು ಮಾಡಿರೋದು. ಅವರಿಗೆ ಹಾಡೋಕೆ ಬರುತ್ತಾ ಎಂದು ಪ್ರಶ್ನೆ ಮಾಡಿದರು.

ದೇಶಭಕ್ತಿ ಹರಿಯುತ್ತಿದ್ದರೆ RSS ಶಾಖೆಗಳಲ್ಲಿ ನಮಸ್ತೇ ಸದಾ ವತ್ಸಲೇ ಬಿಟ್ಟು ವಂದೇ ಮಾತರಂ ಗೀತೆ ಹಾಡೋಕೆ ಹೇಳಿ. ಕೈ ಜೋಡಿಸಿ ವಂದೇ ಮಾತರಂ ಗೀತೆ ಹಾಡಿ RSS ಅವರು ನಮ್ಮ ರಾಷ್ಟ್ರಧ್ವಜಕ್ಕೆ ಗೌರವ ಕೊಡಲಿ. ಆಮೇಲೆ ನಮ್ಮ ಬಳಿ ಬರಲಿ. ಇವರು ಯಾರು ದೇಶದ ಇತಿಹಾಸದಲ್ಲಿ ಏನು ಕೊಡುಗೆ ಇದೆ ಇವರದ್ದು. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ RSS ಏನ್ ಮಾಡಿದ್ದಾರೆ. ಇಷ್ಟೆಲ್ಲಾ‌ ಹೇಳ್ತಾ ಇದ್ದೀರಾ ಬೋಸ್, ನೆಹರೂ, ಸರ್ದಾರ್ ಪಟೇಲ್, ಟ್ಯಾಗೋರ್ ಅವರು ದೇಶ ದ್ರೋಹಿಗಳಾ? ನೀಟ್ ಪೇಪರ್ ಲೀಕ್ ಬಗ್ಗೆ ಚರ್ಚೆ ಮಾಡೋಕೆ ಆಗ್ತಿಲ್ಲ.

ಮೋದಿ ಜನಪ್ರಿಯತೆ ಕಡಿಮೆ ಆಗ್ತಿದೆ. ಅದನ್ನ ಹೆದರಿಸಲು ಆಗ್ತಾ ಇಲ್ಲ. ಜೆನ್ -ಝಿ ಪ್ರತಿಭಟನೆಗೆ ಉತ್ತರ ಇಲ್ಲ. ಪಿಎಂ ಕೇರ್ ಫಂಡ್ ಅಕ್ರಮ, ರಾಮಮಂದಿರ ಚಂದಾ ಚೋರಿ ಬಗ್ಗೆ ಉತ್ತರ ಇಲ್ಲ. ವಿದೇಶಾಂಗ ನೀತಿಯಿಂದ ರೈತರಿಗೆ ಹೊಡೆತ ಬೀಳ್ತಿದೆ. ಟ್ರಂಪ್ ದೋಸ್ತಿಯಿಂದ ಇದು ಆಗ್ತಿದೆ. ಅದರ ಬಗ್ಗೆ ಉತ್ತರ ಇಲ್ಲ. ಇವೆಲ್ಲ ಮುಚ್ಚಿ ಹಾಕೋಕೆ ವಂದೇ ಮಾತರಂ ತಂದಿದ್ದಾರೆ ಅಂತ ಕಿಡಿಕಾರಿದರು.

ಇದೇ ಕಾಳಜಿ ನಿರುದ್ಯೋಗಿ ಯುವಕರ ಬಗ್ಗೆ ಯಾಕೆ ಇಲ್ಲ. ಇದೇ ಕಾಳಜಿ ಆರ್ಥಿಕ ಪರಿಸ್ಥಿತಿ ಬಗ್ಗೆ ಯಾಕೆ ಇಲ್ಲ. ಮಹಿಳೆಯ ರಕ್ಷಣೆ ಬಗ್ಗೆ ಯಾಕೆ ಇಲ್ಲ. ಮೋದಿ ಸ್ಲೋಗನ್ ಪೆಹಲೇ ದೇವಾಲಯ, ಫಿರ್ ಶೌಚಾಲಯ. ದೇವಾಲಯ ಅಯ್ತು ಶೌಚಾಲಯ ಎಲ್ಲಿದೆ. ಯುಪಿ ವಾರಣಾಸಿಯಲ್ಲಿ ಎಲ್ಲಿದೆ ತೋರಿಸಲಿ. ಇದೆಲ್ಲವೂ ಅಟೆನ್ಷನ್ ಡೈವರ್ಟ್ ಮಾಡೋ ತಂತ್ರ. ಸ್ವಾತಂತ್ರ್ಯ ಬಂದ ಮೇಲೆ ಎರಡೇ ಚರಣದಿಂದ 75 ವರ್ಷ ದೇಶ ನಡೆದುಕೊಂಡು ಬಂದಿದೆ. ಇವರಿಗೆ ಹಾಡೋಕೆ ಬರಲ್ಲ. ಬಿಜೆಪಿ- RSS ಹಾಡಲಿ, ಮೋದಿ ಅಮಿತ್ ಶಾ ಟೆಲಿಪ್ರಾಂಪ್ಟರ್ ಇಲ್ಲದೆ ಫುಲ್ ಸಾಂಗ್ ವಂದೇ ಮಾತರಂ ಹಾಡಿದರೆ ನಾನೇ ರಾಜೀನಾಮೆ ಕೊಡ್ತೀನಿ ಅಂತ ಬಿಜೆಪಿ, RSS, ಮೋದಿ, ಅಮಿತ್ ಶಾಗೆ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!