


ಮುಂಬೈ: ತೃತೀಯಲಿಂಗಿಯಂತೆ ನಟಿಸಿ ವ್ಯಕ್ತಿಯೊಬ್ಬ ಮಹಿಳೆ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮುಂಬೈ/ ಮಧ್ಯ ಭಾಗದ ಪೊವೈನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಶೇಷರಾವ್ ಶಿಂಧೆ ಬಂಧಿತ ಆರೋಪಿ. ಮನೆಗೆ ಕೆಟ್ಟದೃಷ್ಟಿ ಬೀಳದಿರಲೆಂದು ದೃಷ್ಟಿ ತೆಗೆಯುವುದಾಗಿ ಹೇಳಿ ಮಹಿಳೆ ಮನೆಗೆ ಪ್ರವೇಶಿಸಿದ್ದ ಆರೋಪಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತೆ ಮನೆಗೆ ನುಗ್ಗಿದ ಆರೋಪಿ, ಏಕಾಏಕಿ ಬೆಡ್ರೂಮ್ಗೆ ಪ್ರವೇಶಿಸಿದ್ದಾನೆ. ನಂತರ ಮಹಿಳೆಯನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪೊವೈ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ.
ಕೃತ್ಯ ಎಸಗಿ ಆರೋಪಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಸೀರೆ ಧರಿಸಿದ್ದ ಆರೋಪಿಯು ಆಟೋರಿಕ್ಷಾದಲ್ಲಿ ಥಾಣೆಯ ಖರೇಗಾಂವ್ನ ಕೊಳೆಗೇರಿಯ ಕಡೆಗೆ ಹೋಗಿದ್ದನ್ನು ಪತ್ತೆಹಚ್ಚಿ, ನಂತರ ಆರೋಪಿಯನ್ನು ಬಂಧಿಸಿರುವುದಾಘಿ ತಿಳಿದುಬಂದಿದೆ.








