Thursday, April 25, 2024
spot_imgspot_img
spot_imgspot_img

ಐಎಎಸ್ ಅಧಿಕಾರಿಯಾದ 3 ಅಡಿಗಳ ಹುಡುಗಿಯ ಕಥೆ.

- Advertisement -G L Acharya panikkar
- Advertisement -

ಕೃಪೆ:-ನಾಗರತ್ನಯ್ಯ ವಜ್ಜನಕುರಿಕೆ ನಾಗಣ್ಣ, ತುಮಕೂರು.

ನೀವು ಸಮಾಜದಲ್ಲಿ ಅನೇಕ ಜನಗಳನ್ನು ಕಂಡಿದ್ದೀರಿ. ಹುಡುಗಿಯರನ್ನು ಹೊರೆಯೆಂದು ಪರಿಗಣಿಸುವ ಮತ್ತು ಅವರು ದೈಹಿಕವಾಗಿ ಅಂಗವಿಕಲರಾಗಿದ್ದರಂತೂ ತೀವ್ರ ನಿರ್ಲಕ್ಷ್ಯ ತಿರಸ್ಕಾರದಿಂದ ನೋಡತ್ತಾರೆ. ಇದು ಇಂತಹಾ ಒಬ್ಬ ಹುಡುಗಿಯ ಕಥೆ.

ನಿಮಗೆ ಹೇಳಲು ಹೊರಟಿರುವುದು ದೈಹಿಕವಾಗಿ ಅಂಗವಿಕಲರಾದ ಜನರು, ಅವರು ಸಮಾಜದ ಕಿರುಕುಳಗಳನ್ನು ಪಡೆಯುತ್ತಲೇ ಇದ್ದರೂ ಒಂದು ದಿನ ಸಾಧನೆಯಿಂದ ಒಡಕು ಬಾಯಿ ಸಮಾಜದ ಬಾಯಿ ಮುಚ್ಚಬಲ್ಲರು.
ಅಂತಹ ಒಬ್ಬ ಮಹಿಳೆಯನ್ನು ರಾಜಸ್ಥಾನದ ಅಜ್ಮೀರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡಲಾಗಿದೆ. ಅವರ ಹೆಸರು ಆರತಿ ಡೋಗ್ರಾ, ಕೇವಲ 3 ಅಡಿಗಳ ಎತ್ತರದ ಕುಬ್ಜ ಮಹಿಳೆ. ಐಎಎಸ್ ಅಧಿಕಾರಿಯಾಗಿರುವ 3 ಅಡಿಗಳ ಈ ಹುಡುಗಿಯ ಕಥೆಯನ್ನು ಕೇಳಿರಿ.

ಆರತಿ ಡೋಗ್ರಾ ಇಂದು ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿ. ಆರತಿಯ ಎತ್ತರವು ಚಿಕ್ಕದಾಗಿದೆ ಸಾದನೆಯ ಮೂರ್ತಿ ಬಹಳ ಎತ್ತರವಾಗಿದೆ. ಕಾರಣ ಇಂದು ಅವರು ದೇಶದ ಮಹಿಳೆಯರ ಆಡಳಿತ ವರ್ಗದಲ್ಲಿ ಒಂದು ಉನ್ನತ ಉದಾಹರಣೆಯಾಗಿದ್ದಾರೆ, ಮತ್ತು ಸಮಾಜದಲ್ಲಿನ ಬದಲಾವಣೆಗೆ ಅವರು ಹೊಸ ಮಾದರಿಯಾಗಿದ್ದಾರೆ
ಆರತಿ ಮೂಲತಃ ಉತ್ತರಾಖಂಡದ ನಿವಾಸಿ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಜನಿಸಿದರು.ಆರತಿ 2006 ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಅವರ ಎತ್ತರವು ಕೇವಲ 3 ಅಡಿ ಆರು ಇಂಚುಗಳು, ಇದರಿಂದ ಬಾಲ್ಯದಿಂದಲೂ ತಾರತಮ್ಯವನ್ನು ಎದುರಿಸ ಬೇಕಾಯಿತು. ಬಾಲ್ಯದಲ್ಲಿ ಇವರ ಎತ್ತರ ಕಂಡ ಜನರು ಈ ಹುಡುಗಿ ಒಂದು ಹೊರೆ ಬದಲಿಗೆ ಕೊಲ್ಲುವುದು ಒಳಿತು ಎಂದು ಹೇಳಿದ್ದರಂತೆ.ಏನನ್ನೂ ಮಾಡಲು ಹೇಸದ ಜನರನ್ನು ನೀವು ಸಮಾಜದಲ್ಲಿ ನೋಡಿರುತ್ತೀರಿ. ಆರತಿಯವರ ವಿಚಾರದಲ್ಲೂ ಈ ರೀತಿ ಮಾತುಗಳು ಸಹಜವಾಗಿ ಸಂಭವಿಸಿವೆ. ಸಮಾಜದ ಇಂತಹ ಮನೋಭಾವದ ಜನರು ಅವರನ್ನು ನೋಡಿ ನಗುತ್ತಿದ್ದರು, ತಮಾಷೆ ಮಾಡಿ ಗೇಲಿ ಮಾಡಿದರು. ಆದರೆ ಆರತಿಯ ಪೋಷಕರು ಈ ಎಲ್ಲ ಟೀಕೆಗಳನ್ನು ಮೀರಿದ ಉನ್ನತವಾದ ಜನರು. ನನ್ನ ಮಗು ಹೆಣ್ಣು ಆದರೂ ನನ್ನ ಮಗುವಲ್ಲವೆ. ಹಾಗೆಯೇ ಪ್ರೀತಿಸಿದೆ.
ತಂದೆಯಾದವರು ಮಗಳಿಗೆ ವಿದ್ಯೆ ಸಂಸ್ಕೃತಿ ಕಲಿಸಿದರು ಮತ್ತು ಅದರ ಫಲವಾಗಿ ಅವಳು ಇಂದು ಅಧಿಕಾರಿ ಯಾಗಿದ್ದಳೆನ್ನುತ್ತಾರೆ ಆರತಿಯ ತಾಯಿ. ಆರತಿ ತನ್ನ ಅಧಿಕಾರಾ ಅವಧಿಯಲ್ಲಿ ಬಹಳ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.

ಪ್ರಸ್ತುತ ಅವರನ್ನು ರಾಜಸ್ಥಾನದ ಅಜ್ಮೀರ್‌ನ ನೂತನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡಲಾಗಿದೆ. ಅವರು ಎಸ್‌ಡಿಎಂ ಎಜೆಎಂಆರ್ ಹುದ್ದೆಗೂ ಮುನ್ನ ಅವರು ರಾಜಸ್ಥಾನದ ಬಿಕಾನೆರ್ ಮತ್ತು ಬುಂಡಿ ಜಿಲ್ಲೆಗಳಲ್ಲಿ ಕಲೆಕ್ಟರಾಗಿದ್ದರು. ಇದಕ್ಕೂ ಮೊದಲು ಅವರು ಡಿಸ್ಕಾಂನ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿದ್ದರು. ಬಿಕಾನೆರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ, ಆರತಿ ಬಾಕಾ ಬಿಕೋ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಬಯಲಿನಲ್ಲಿ ಮಲ ವಿಸರ್ಜನೆ ಮಾಡದಿರಲು ಜನರಿಗೆ ಪ್ರೇರಣೆ ನೀಡಲಾಯಿತು. ಇದಕ್ಕಾಗಿ ಆಡಳಿತದ ಜನರು ಬೆಳಿಗ್ಗೆ ಗ್ರಾಮಕ್ಕೆ ತೆರಳಿ ಜನರು ತೆರೆದ ಮಲವಿಸರ್ಜನೆ ಮಾಡುವುದನ್ನು ತಡೆದರು. ಗ್ರಾಮ-ಗ್ರಾಮಗಳಲ್ಲೂ ಕಾಂಕ್ರೀಟ್ ಶೌಚಾಲಯಗಳನ್ನು ಮಾಡಲಾಗಿದೆ. ಮೊಬೈಲ್ ಸಾಫ್ಟ್‌ವೇರ್ ಮೂಲಕ ಈ ವ್ಯವಸ್ಥೆ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಈ ಅಭಿಯಾನವನ್ನು 195 ಗ್ರಾಮ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿಸಲಾಯಿತು. ಬಾಕಾ ಬಿಕೊ ಯಶಸ್ಸಿನ ನಂತರ, ಇತರೆ ಜಿಲ್ಲೆಗಳು ಸಹ ಈ ಮಾದರಿಯನ್ನು ಅಳವಡಿಸಿಕೊಂಡವು. ಆರತಿ ಡೋಗ್ರಾ ಅವರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೋಧಪುರ್ ಡಿಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡ ಮೊದಲ ಮಹಿಳಾ ಐಎಎಸ್ ಅಧಿಕಾರಿ ಆರತಿ.

ಈ ಹುದ್ದೆಯನ್ನು ವಹಿಸಿಕೊಂಡ ನಂತರ ಆರತಿ ಡೋಗ್ರಾ, ಜೋಧ್‌ಪುರ ಡಿಸ್ಕಾಂನಲ್ಲಿನ ವಿದ್ಯುತ್ ತ್ಯಾಜ್ಯ, ವಿದ್ಯುತ್ ತ್ಯಾಜ್ಯವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಜೂನಿಯರ್ ಎಂಜಿನಿಯರ್‌ನಿಂದ ಮುಖ್ಯ ಎಂಜಿನಿಯರ್‌ ವರೆಗೂ ವಹಿಸಿದ್ದರಿಂದ ದೂರ ಸ್ಥಳದಲ್ಲಿ ವಿದ್ಯುತ್ ಇಲ್ಲದಿರುವಲ್ಲಿ ಅಲ್ಲಿ ವಿದ್ಯುತ್ ತಲುಪಿಸುವ ಸರ್ವಪ್ರಯತ್ನಗಳು ಅವರಿಂದಾದವು.ಅಲ್ಲದೆ, ಜೋಧ್‌ಪುರ ಡಿಸ್ಕಾಂನಲ್ಲಿ ಅವರು ಎನರ್ಜಿ ಸೇಫ್ಟಿ ಸರ್ವಿಸ್ ಲಿಮಿಟೆಡ್(ಈಸ್ಲ್) ನಿಂದ 3 ಲಕ್ಷ 27 ಸಾವಿರ 819 ಎಲ್ಇಡಿ ಬಲ್ಬ್ (ಎಲ್ಇಡಿ ಬಲ್ಬ್) ಅನ್ನು ಜೋಧಪುರ್ ಡಿಸ್ಕಾಂನಲ್ಲಿ ವಿತರಿಸಿದರು. ಇದರಿಂದ ವಿದ್ಯುತ್ ಬಳಕೆಯಲ್ಲಿ ಹೆಚ್ಚು ನಿಯಂತ್ರಣ ಸಾಧ್ಯವಾಯಿತು.
ಆರತಿ ಅವರ ತಂದೆ ಕರ್ನಲ್ ರಾಜೇಂದ್ರ ದೋಗ್ರಾ ಸೈನ್ಯದಲ್ಲಿ ಅಧಿಕಾರಿಯಾಗಿದ್ದು, ತಾಯಿ ಕುಮ್ಕುಮ್ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ. ಅವರು ಹೇಳಿದಂತೆ ಆರತಿ ಹುಟ್ಟಿದ ಸಮಯದಲ್ಲಿ, ವೈದ್ಯರು ತಮ್ಮ ಹುಡುಗಿಯನ್ನು ಸಾಮಾನ್ಯ ಶಾಲೆಯಲ್ಲಿ ಓದಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಆದರೆ ಅವರ ಪೋಷಕರು ಅವರನ್ನು ಸಾಮಾನ್ಯ ಶಾಲೆಯಲ್ಲಿ ಸೇರಿಸಿದರು. ಅವರ ಪೋಷಕರು ಅವರು ಮಗುವಿನ ವಿಭಿನ್ನತೆಯ ಬಗ್ಗೆ ಯೋಚಿಸಲಿಲ್ಲ.

ನಮ್ಮ ಕನಸುಗಳನ್ನು ಈಡೇರಿಸಲು ಈ ನನ್ನ ಏಕೈಕ ಮಗಳು ಸಾಕು ಎಂದು ಕೊಂಡರಂತೆ.
ಆರತಿ ಶಿಕ್ಷಣ ಡೆಹ್ರಾಡೂನ್‌ ನ ವಲ್ಹಾಮಾ ಬಾಲಕಿಯರ ಶಾಲೆಯಲ್ಲಿ ನಡೆಯಿತು. ನಂತರ ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀರಾಮ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. Upಯಲ್ಲಿ ಮುನ್ಸಿಪಲ್ ಸೇವೆಯಲ್ಲಿದ್ದಾಗ
ಐಎಎಸ್ ಅಧಿಕಾರಿ ಡಿಎಂ ಐಎಎಸ್ ಮನಿಷಾದಿಂದ ಪ್ರೇರಿತರಾದ ಆರತಿಯವರು
ಸ್ನಾತಕೋತ್ತರ ಪದವಿಗಾಗಿ ಮತ್ತೆ ಡೆಹ್ರಾಡೂನ್‌ಗೆ ಬಂದರು. ಇಲ್ಲಿ ಅವರು ಡೆಹ್ರಾಡೂನ್‌ನ ಡಿಎಂ ಐಎಎಸ್ ಮನಿಷಾ ಅವರನ್ನು ಭೇಟಿಯಾದರು. ಆಗ ಮನಿಷಾ ಆರತಿಯವರ ಆಲೋಚನೆಯನ್ನು ಸಂಪೂರ್ಣವಾಗಿ ಬದಲಾಯಿಸಿದರು. ಆರತಿ ಎಷ್ಟು ಪ್ರೇರಿತರಾದರೆಂದರೆ ಅವರಲ್ಲಿಯೂ ಐಎಎಸ್‌ನ ಉತ್ಸಾಹ ಹುಟ್ಟಿತು. ಇದಕ್ಕಾಗಿ ಅವರು ಶ್ರಮಿಸಿದರು ಮತ್ತು ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದರು.
ಜಗತ್ತು ಏನೇ ಹೇಳಿದರೂ ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆಯಿದ್ದರೆ ಎಲ್ಲರ ಆಲೋಚನೆಯನ್ನು ನೀವು ತಿರುವು ಮುರುವು ಬದಲಾಯಿಸಬಹುದು ಎಂದು ಆರತಿ ಸಾಬೀತು ಪಡಿಸಿದ್ದಾರೆ

- Advertisement -

Related news

error: Content is protected !!