Monday, May 6, 2024
spot_imgspot_img
spot_imgspot_img

ವಿಟ್ಲ: (ಅ.21) ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇದರ ಕುಳ-ಕುಂಡಡ್ಕ ಶಾಖೆಯ ನೂತನ ಕಟ್ಟಡದ ’ಕಲಶಾಮೃತ’ ಉದ್ಘಾಟನಾ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇದರ ಕುಳ-ಕುಂಡಡ್ಕ ಶಾಖೆಯ ನೂತನ ಕಟ್ಟಡದ ’ಕಲಶಾಮೃತ’ ಉದ್ಘಾಟನಾ ಸಮಾರಂಭವು ದಿನಾಂಕ 21 ಅಕ್ಟೋಬರ್‍ 2023 ಶನಿವಾರ ಸಮಯ ಪೂರ್ವಾಹ್ನ ಗಂಟೆ 10.30ಕ್ಕೆ ನಡೆಯಲಿದೆ.

ಬೆಳಿಗ್ಗೆ ಗಂಟೆ 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಲಿ., ಬೆಂಗಳೂರು ಇದರ ಅಧ್ಯಕ್ಷ, ಮಂಗಳೂರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಅಧ್ಯಕ್ಷ, ಮಂಗಳೂರು ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ.) ಮ್ಯಾನೇಜಿಂಗ್ ಟ್ರಸ್ಟಿ ಸಹಕಾರ ರತ್ನ ಡಾ| ಎಂ.ಎನ್ ರಾಜೇಂದ್ರ ಕುಮಾರ್ ’ಕಲಶಾಮೃತ’ದ ಉದ್ಘಾಟನೆ ಮತ್ತು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲ್ ಬ್ಯಾಂಕಿಂಗ್ ವಿಭಾಗ ಉದ್ಘಾಟಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್‍ ರೈ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಸೂಪರ್ ಬಜಾರ್‌ನ ಉದ್ಘಾಟಿಸಲಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಮಂಗಳೂರು ಇದರ ನಿರ್ದೇಶಕರು ಟಿ.ಜಿ ರಾಜಾರಾಮ ಭಟ್ ಗೋದಾಮು ಉದ್ಘಾಟಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಗಣಕೀಕರಣ ಚಾಲನೆ ನೀಡಲಿದ್ದಾರೆ. ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್ ರಮೇಶ್ ಸಭಾಂಗಣ ಉದ್ಘಾಟಿಸಲಿದ್ದಾರೆ. ಇಡ್ಕಿದು ಗ್ರಾ.ಪಂ.ಅಧ್ಯಕ್ಷ ಮೋಹಿನಿ ಜಯಕರ್ ಭದ್ರತಾಕೋಶ ಚಾಲನೆ ನೀಡಲಿದ್ದಾರೆ.

ಅತಿಥಿಗಳಾಗಿ ದ.ಕ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್‌ ಕೌಶಲ್‌ ಶೆಟ್ಟಿ, ಮಂಗಳೂರು ಮನ್‌ದೇವ್‌ ಎಜ್ಯುಕೇಶನಲ್‌& ಚಾರಿಟೇಬಲ್‌ ಟ್ರಸ್ಟ್‌(ರಿ) ಅಧ್ಯಕ್ಷ, ಕರ್ನಾಟಕ ಸರ್ಕಾರದ ಮಾಜಿ ಸಚಿವ ನಾಗರಾಜ ಶೆಟ್ಟಿ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರು ಸುರೇಶ್‌ ಕೆ.ಎಸ್‌, ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್‌ ಕುಮಾರ್‌ ಜೆ, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಪುನೀತ್‌ ಮಾಡತ್ತಾರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಲಿ. ವಿಟ್ಲ ವಲಯ ಮೇಲ್ವಿಚಾರಕ ಯೋಗೀಶ್‌ ಹೆಚ್‌, ಎ.ಎಂ ಕಾಟೇಜ್‌ ಅಳಕೆಮಜಲಿನ ಮಹಮ್ಮದ್‌ ಕುಂಞಿ ಹಾಜಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಲಿ.ಮಂಗಳೂರು ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು, ಮೈಸೂರು ಎಸ್‌.ಎಲ್‌.ವಿ ಗ್ರೂಪ್ಸ್‌ನ ದಿವಾಕರ ದಾಸ್‌ ನೇರ್ಲಾಜೆ, ಕೃಷ್ಣಯ್ಯ ವಿಟ್ಲ ಅರಮನೆ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುವಾಳ, ಕೃಷ್ಣಪ್ಪ ಪೂಜಾರಿ ಪಾಂಡೇಲು, ಹಾಲು ಉತ್ಪಾದಕರ ಸಹಕಾರಿ ಸಂಘ ಕುಂಡಡ್ಕ ಇದರ ಅಧ್ಯಕ್ಷ ತೀರ್ಥರಾಮ ಗೌಡ ಸೇನೆರೆಮಜಲು, ಬಂಟ್ವಾಳ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಗೋಪಾಲ್‌ ಎನ್‌.ಜೆ, ಬೆನೆಡಿಕ್ಟ್‌ ಡಿ’ಸೋಜ ಕಾರ್ಯಾಡಿ-ಕುಳ ಭಾಗವಹಿಸಲಿದ್ದಾರೆ.

ಕುಳ-ಕುಂಡಡ್ಕ ಶಾಖೆಯ ನೂತನ ಕಟ್ಟಡ ಉದ್ಘಾಟನೆಯ ಪ್ರಯುಕ್ತ 2023 ಅಕ್ಟೋಬರ್ 31ರಿಂದ 2024 ಮಾರ್ಚ್‌ 30ರ ವರೆಗೆ ಸೋಲಾರ್‍ ಹಾಗೂ ವಾಹನ ಖರೀದಿ ಸಾಲಗಳ ಮೇಲೆ ಕಡಿಮೆ ಬಡ್ಡಿದರದಲ್ಲಿ(10.5%) ಸಾಲ ದೊರೆಯಲಿದೆ.

ಹೊಸ ಚಿನ್ನಾಭರಣ ಖರೀದಿಗೆ “ಸ್ವರ್ಣ ದೀಪ” ಯೋಜನೆಯಡಿ 10.5% ಬಡ್ಡಿದರದಲ್ಲಿ ಆಭರಣದ ನಿವ್ವಳ ತೂಕದ ಮೇಲೆ 90% ಸಾಲವನ್ನು ಅನುಕೂಲಕ್ಕೆ ತಕ್ಕಂತೆ 3ವರ್ಷದವರೆಗಿನ ಸಮಾನ ಕಂತುಗಳಲ್ಲಿ ತುಂಬಬಹುದು. ಹಾಗೂ ಚಿನ್ನದ ಮೇಲೆ ಓವರ್‌ ಡ್ರಾಫ್ಟ್‌ “ಸ್ವರ್ಣ ಕ್ಷಣ” ಸಾಲ ಯೋಜನೆಯಡಿ 10.5% ಬಡ್ಡಿದರದಲ್ಲಿ ಸಾಲ ಲಭ್ಯವಿದೆ.

- Advertisement -

Related news

error: Content is protected !!