Thursday, July 23, 2026
spot_imgspot_img
spot_imgspot_img

ಪಾಕ್‌ನ ಬಲೂಚಿಸ್ತಾನದಲ್ಲಿ IED ಸ್ಫೋಟ – 4 ಮಂದಿ ಸಾವು

- Advertisement -
- Advertisement -

ಬಲೂಚಿಸ್ತಾನದ ಖುಜ್ದಾರ್ ಜಿಲ್ಲೆಯ ಮಾರುಕಟ್ಟೆಯಲ್ಲಿ ಮೋಟಾರ್‌ಬೈಕಿಗೆ ಹಾಕಲಾಗಿದ್ದ ಐಇಡಿ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ.

ಸ್ಫೋಟಕವನ್ನು ಮೋಟಾರ್‌ಸೈಕಲ್‌ಗೆ ಅಳವಡಿಸಲಾಗಿತ್ತು. ಕಾರಿನ ಪಕ್ಕದಲ್ಲಿ ಬೈಕ್ ನಿಲ್ಲಿಸಿದ ನಂತರ ರಿಮೋಟ್ ಮೂಲಕ ಸ್ಫೋಟಿಸಲಾಗಿದೆ ಎಂದು ವರದಿಯಾಗಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖುಜ್ದಾರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಾವೇದ್ ಜೆಹ್ರಿ, ಮಾರುಕಟ್ಟೆಯ ಸುತ್ತಮುತ್ತಲಿನ ಕಾಲೇಜು ಬಳಿ ಸ್ಫೋಟ ಸಂಭವಿಸಿದೆ. ವಾಹನಗಳು ಕೂಡ ಸುಟ್ಟುಹೋಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಖುಜ್ದಾರ್ ಬೋಧನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!