- Advertisement -
- Advertisement -



ವಿಟ್ಲ: ರಮಝಾನ್ ಪವಿತ್ರ ಮಾಸದ ಅಂಗವಾಗಿ ವಿ. ಫೌಂಡೇಶನ್ ವಿಟ್ಲ ವತಿಯಿಂದ “ಬೃಹತ್ ಸೌಹಾರ್ದ ಇಫ್ತಾರ್ ಸಂಗಮ 2026” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾರ್ಚ್ 08, ಭಾನುವಾರ ಸಂಜೆ 6.45ಕ್ಕೆ ವಿಟ್ಲದ ವಿ.ಹೆಚ್. ಕಾಂಪ್ಲೆಕ್ಸ್ನಲ್ಲಿ ಈ ಭವ್ಯ ಇಫ್ತಾರ್ ಕೂಟವು ನಡೆಯಲಿದೆ.

ಸಮಾಜದಲ್ಲಿ ಸೌಹಾರ್ದತೆ, ಸಹೋದರತ್ವ ಹಾಗೂ ಏಕತೆ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಇಫ್ತಾರ್ ಸಂಗಮವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಧಾರ್ಮಿಕ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದು , ಸಾಮೂಹಿಕವಾಗಿ ಉಪವಾಸ ಮುರಿಯುವ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘಟಕರು ತಿಳಿಸಿದ್ದಾರೆ.
- Advertisement -








