

ಕಡಬ : ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿ, ಜಾನುವಾರುಗಳನ್ನು ವಶಕ್ಕೆ ಪಡೆದ ಘಟನೆ ರಾಮಕುಂಜದ ನೀರಾಜೆ ಎಂಬಲ್ಲಿ ನಡೆದಿದೆ.
ಜು. 24 ರಂದು ಸಂಜೆ ಉಪ್ಪಿನಂಗಡಿ ಕಡೆಯಿಂದ 2 ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ರಾಮಕುಂಜ ಗ್ರಾಮದ ನೀರಾಜೆ ಕಡೆಗೆ ಸಾಗಿಸುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಕಡಬ ಠಾಣಾ ಉಪನಿರೀಕ್ಷಕರಾದ ಅಭಿನಂದನ ಎಂ.ಎಸ್ ರವರು ಸಿಬ್ಬಂದಿಗಳೊಂದಿಗೆ ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದಾಗ, ಆರೋಪಿಗಳು ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದು, ಬಳಿಕ ಪಿಕಪ್ ವಾಹನವನ್ನು ಪರಿಶೀಲಿಸಿದಾಗ, ವಾಹನದಲ್ಲಿ 2 ದನಗಳನ್ನು ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿರುವುದು ಕಂಡುಬಂದಿರುತ್ತದೆ. ಮುಂದಿನ ಕಾನೂನುಕ್ರಮಕ್ಕಾಗಿ ವಾಹನವನ್ನು ಹಾಗೂ ಜಾನುವಾರಗಳನ್ನು ವಶಪಡಿಸಿಕೊಂಡು, ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ :75/2024.ಕಲಂ: 4.5.12 ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020 ಮತ್ತು ಕಲಂ:66.192(A) IMV ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.