Thursday, May 16, 2024
spot_imgspot_img
spot_imgspot_img

ಉಳ್ಳಾಲ: ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಅಡ್ಡೆಗೆ ದಾಳಿ: ಓರ್ವನ ಬಂಧನ

- Advertisement -G L Acharya panikkar
- Advertisement -

ಉಳ್ಳಾಲ : ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ, ಸುಮಾರು 55 ಗ್ಯಾಸ್ ಸಿಲಿಂಡರ್ ಮತ್ತು 280 ಲೀಟರ್‌ನಷ್ಟು ಪೆಟ್ರೋಲನ್ನು ವಶಪಡಿಸಿಕೊಂಡು, ಓರ್ವನನ್ನು ಬಂಧಿಸಿದ್ದಾರೆ.

ಅಬ್ದುಲ್ ಅಲ್ತಾಫ್(49) ಬಂಧಿತ ಆರೋಪಿಯಾಗಿದ್ದು, ಈತ ಉಳ್ಳಾಲ ಕೋಟೆಪುರದ ಬರಕಾ ಫ್ಯಾಕ್ಟರಿ ಮುಂಭಾಗದ ರಸ್ತೆ ಬದಿಯ ಮನೆಯೊಂದರಲ್ಲಿ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ನಡೆಸುತ್ತಿದ್ದ ಎನ್ನಲಾಗಿದೆ. ಸಂಶಯ ಬಾರದಿರಲೆಂದು ಮನೆಯ ಮುಂಭಾಗ ಗುಜರಿ ವ್ಯಾಪಾರದ ಸೋಗು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮ‌ ಗ್ಯಾಸ್ ಫಿಲ್ಲಿಂಗ್ ಜೊತೆ ಸ್ಥಳೀಯ ನಾಡ ದೋಣಿಗಾರರಿಗೆ ದುಪ್ಪಟ್ಟು ದರದಲ್ಲಿ ಪೆಟ್ರೋಲನ್ನು ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!